ಭಾರತ, ಫೆಬ್ರವರಿ 21 -- ಪ್ರೇಮಿಗಳ ದಿನ ಮುಗಿದು ಇದೀಗ ಆ್ಯಂಟಿ ವ್ಯಾಲೆಂಟೈನ್ಸ್ ವೀಕ್ ನಡೆಯುತ್ತಿದೆ. ಪ್ರೀತಿ ಮಾಡುವವರಿಗೆ ಮಾತ್ರವಲ್ಲ, ಪ್ರೀತಿಸಿ ದೂರವಾಗುವವರಿಗೂ ಒಂದು ದಿನವಿದೆ. ನಿಮ್ಮ ಪ್ರೇಮಿಯಿಂದ ನೀವು ದೂರಾಗಬೇಕು ಎಂದುಕೊಂಡಿದ್ದರೆ ಈ ದಿನ ಸೂಕ್ತ. ಅದುವೆ ಬ್ರೇಕ್‌ಅಪ್‌ ಡೇ. ಇದು ಪ್ರೀತಿಯಿಂದ ದೂರವಾಗುವವರಿಗೆ ವಿಶೇಷ ದಿನ ಅಂತಲೇ ಹೇಳಬಹುದು.

ಆ್ಯಂಟಿ ವ್ಯಾಲೆಂಟೈನ್ಸ್ ವೀಕ್‌ನ ಕೊನೆಯ ದಿನವನ್ನು ಬ್ರೇಕ್‌ಅಪ್‌ ಡೇ ಎಂದು ಆಚರಿಸಲಾಗುತ್ತದೆ. ಪ್ರತಿವರ್ಷ ಫೆಬ್ರುವರಿ 21 ರಂದು ಬ್ರೇಕ್‌ ಡೇ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಆಚರಣೆಯ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರೀತಿ ಬಹಳ ಶ್ರೇಷ್ಠ, ಪ್ರೇಮ ಸಂಬಂಧ ಅತ್ಯಂತ ಮಧುರ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಎಲ್ಲರ ಪ್ರೀತಿಯು ಸಿಹಿಯಾಗಿಯೇ ಇರುವುದಿಲ್ಲ. ಕೆಲವರಿಗೆ ಪ್ರೀತಿಯು ಆಳವಾದ ನೋವು ಉಂಟು ಮಾಡಬಹುದು. ಅದು ಮುಳ್ಳುಗಳಂತೆ ಮನಸ್ಸಿಗೆ ಚುಚ್ಚಬಹುದು. ಕೆಲವೊಮ್ಮೆ ಪ್ರೀತಿಸಿದ ವ್ಯಕ್ತಿಯ ಜೊತೆಗಿದ್ದರೆ ಬದುಕು ನರಕವಾಗಬಹುದು ಎನ್ನಿಸುತ್ತದೆ. ಅವರ...