ಭಾರತ, ಮಾರ್ಚ್ 12 -- ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಮಂಡಿಸಿದ 30 ದಿನಗಳ ಕದನ ವಿರಾಮಕ್ಕೆ ಉಕ್ರೇನ್ ಒಪ್ಪಿಕೊಂಡಿದೆ. ಸೌದಿ ಅರೇಬಿಯಾದಲ್ಲಿ ನಡೆದ ಅಮೆರಿಕ ಮತ್ತು ಉಕ್ರೇನ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ಮಾತುಕತೆ ನಡೆಸಿದ ಬಳಿಕ ಈ ಒಪ್ಪಂದಕ್ಕೆ ಬರಲಾಗಿದೆ. ಇದರೊಂದಿಗೆ ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಅಲ್ಪವಿರಾಮ ಬಿದ್ದಿದೆ. ಉಭಯ ದೇಶಗಳ ಸಂಬಂಧವನ್ನು ತಹಬದಿಗೆ ತರಲು ಮತ್ತು ಉಂಟಾಗಿದ್ದ ಬಿರುಕು ಸರಿಪಡಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದರೂ ತಪ್ಪಾಗಲ್ಲ. ಕೈವ್ ಜತೆ ಮಿಲಿಟರಿ ನೆರವು ಮತ್ತು ಗುಪ್ತಚರ ಹಂಚಿಕೆ ಪುನರಾರಂಭಿಸಲು ವಾಷಿಂಗ್ಟನ್ ಕೂಡ ಬದ್ಧವಾಗಿರುವುದಾಗಿ ತಿಳಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ನಡುವಿನ ಓವಲ್ ಆಫೀಸ್​​ನಲ್ಲಿ ನಡೆದಿದ್ದ ಘರ್ಷಣೆಯ 2 ವಾರಗಳ ನಂತರ ಈ ಒಪ್ಪಂದಕ್ಕೆ ಬರಲಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಜೋ ಬೈಡನ್ ಅವರು ಉಕ್ರೇನ್​​ಗೆ ಬೆಂಬಲ ತೋ...