ಭಾರತ, ಜನವರಿ 28 -- ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡವೊಂದು ಕುಸಿದು ಕಾರ್ಮಿಕನೊಬ್ಬ ಅವಶೇಷಗಳ ಅಡಿ ಸಿಲುಕಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿಯಿರುವ ಮಹಾರಾಣಿ ಕಾಲೇಜು ಕಟ್ಟಡ ಕೆಲವು ದಿನಗಳ ಹಿಂದೆ ಕುಸಿದಿತ್ತು. ಆ ಕಟ್ಟಡದ ದುರಸ್ಥಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಿಲುಕಿದ್ದಾರೆ. ಅವರನ್ನು ಹೊರ ತೆಗೆಯಲು ಅಗ್ನಿ ಶಾಮಕ ದಳದ ತಂಡಗಳು ನಿರಂತರ ಪ್ರಯತ್ನ ನಡೆಸಿವೆ.ಮೈಸೂರಿನ ಗೌಸಿಯನಗರದ ನಿವಾಸಿ ಸದ್ದಾಂ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕಾರ್ಮಿಕ ಎಂದು ಗುರುತಿಸಲಾಗಿದೆ.

ಶಿಥಿಲಗೊಂಡಿದ್ದ ಪಾರಂಪರಿಕ ಮಹಾರಾಣಿ ಕಾಲೇಜು ಕಟ್ಟಡವನ್ನು ಕರ್ನಾಟಕ ಸರ್ಕಾರ ಅನುದಾನದಡಿ ದುರಸ್ಥಿ ಕೆಲಸ ಆರಂಭಿಸಲಾಗಿತ್ತು. ಕೆಲ ವರ್ಷಗಳ ಹಿಂದೆಯೇ ಕಟ್ಟಡ ಕುಸಿದರೂ ಈಗ ಅನುದಾನ ಬಿಡುಗಡೆಯಾಗಿದ್ದರಿಂದ ಅದನ್ನು ತೆರವುಗೊಳಿಸುವ ಕೆಲಸ ನಡೆದಿತ್ತು. ಕಟ್ಟಡದ ಕಿಟಕಿಗಳನ್ನು ತೆಗೆದು ಹಾಕುವ ವೇಳೆ ಸಂಭ...