ಭಾರತ, ಮೇ 1 -- ಬೆಂಗಳೂರು: 2025ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ನಾಳೆ ಅಂದರೆ ಮೇ 2ರಂದು ಪ್ರಕಟವಾಗಲಿದೆ. ಫಲಿತಾಂಶವನ್ನು karresults.nic.in ವೆಬ್‌ಸೈಟ್‌ನಲ್ಲಿ ಅಪರಾಹ್ನ 12:30 ಬಳಿಕ ವೀಕ್ಷಿಸಬಹುದು. ಎಸ್‌ಎಸ್‌ಎಲ್‌ಸಿ ಫಲಿತಾಂಶದ ಕುರಿತು ಬೆಳಗ್ಗೆ 11-30 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಈ ಸುದ್ದಿಗೋಷ್ಠಿ ನಡೆಯಲಿದೆ. ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್ 21ರಿಂದ ಏಪ್ರಿಲ್ 4, 2025ರವರೆಗೆ ನಡೆದಿತ್ತು.
ಆನ್‌ಲೈನ್‌ನಲ್ಲಿ ನಾಳೆ ಫಲಿತಾಂಶ ಪ್ರಕಟವಾಗಲಿದೆ. ನಾಳೆ ಮಧ್ಯಾಹ್ನ 12:30ರ ವೇಳೆಗೆ karresults.nic.in/ ಹಾಗೂ kseab.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಿಸಬಹುದು. ಈ ವೆಬ್‌ಸೈಟ್‌ಗಳ ಮುಖಪುಟದಲ್ಲಿಯೇ ಫಲಿತಾಂಶದ ಲಿಂಕ್‌ಗಳು ಇರಲಿದೆ. SSLC Result 2025 ಎಂಬ ಲಿಂಕ್ ಮೇಲೆ ಕ್ಲಿಕ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.