ಭಾರತ, ಫೆಬ್ರವರಿ 12 -- ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಯವರು ಯಾವುದೇ ಸಂಕಷ್ಟಕ್ಕೂ ಜಗ್ಗುವುದಿಲ್ಲ. ಬದುಕಿನಲ್ಲೇ ಎಷ್ಟೇ ಕಷ್ಟಗಳು ಎದುರಾದ್ರೂ ಯೋಚಿಸದೇ ಮುನ್ನುಗುತ್ತಾರೆ. ಧೈರ್ಯವಾಗಿ ಬಂದ ಕಷ್ಟಗಳನ್ನೆಲ್ಲಾ ಎದುರಿಸುತ್ತಾರೆ. ಇವರ ಆತ್ಮವಿಶ್ವಾಸಕ್ಕೆ ಎಂದಿಗೂ ಸಾಟಿ ಎಂಬುದು ಇರುವುದಿಲ್ಲ. ಬಲವಾದ ಇಚ್ಛಾಶಕ್ತಿ ಹೊಂದಿರುವ ಕಾರಣ ಇವರು ಬಂದಿದ್ದೆನ್ನೆಲ್ಲವನ್ನೂ ಎದುರಿಸುತ್ತಾರೆ. ವೃತ್ತಿಜೀವನ, ವೈಯಕ್ತಿಕ ಜೀವನ, ಸಂಬಂಧ ಎಲ್ಲ ವಿಚಾರಗಳಲ್ಲೂ ಇವರು ಧೈರ್ಯದಿಂದ ಮುನ್ನುಗ್ಗಿ ಬದುಕನ್ನು ಎದುರಿಸುತ್ತಾರೆ. ಯಾವುದೇ ಅವಕಾಶಗಳನ್ನಾಗಲಿ ಇವರು ಸಮರ್ಥವಾಗಿ ಎದುರಿಸುತ್ತಾರೆ. ಅಂತಹ 5 ರಾಶಿಯವರು ಯಾರು ಎಂಬುದನ್ನು ನೋಡೋಣ.

ಇವರು ನಿರ್ಭೀತ ಮತ್ತು ಸಾಹಸಮಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಎಂತಹ ಅಪಾಯವಿದ್ದರೂ ಕುಗ್ಗದೇ ಮುನ್ನೆಡೆಯುವ ರಾಶಿಯವರು. ಯಾವುದೇ ಸವಾಲುಗಳಿಗೂ ತಲೆ ಕೊಡುವ ಸ್ವಭಾವ ಇವರದ್ದು. ಅವರ ದಿಟ್ಟ ಮತ್ತು ಆತ್ಮವಿಶ್ವಾಸದ ಮನೋಭಾವದಿಂದ,ಅಪಾಯಗಳನ್ನು ತೆಗೆದುಕೊಳ್ಳಲು ಮತ್ತು ಅನಿಶ್ಚಿತತೆಯನ್...