ಭಾರತ, ಫೆಬ್ರವರಿ 27 -- ಗಣಿತ ಎನ್ನುವುದು ಕೆಲವರಿಗೆ ಕಬ್ಬಿಣದ ಕಡಲೆಯಾದರೆ, ಕೆಲವರಿಗೆ ಇಷ್ಟದ ವಿಷಯ. ಗಣಿತದ ಸೂತ್ರಗಳನ್ನು ನೋಡಿದ ಕೂಡಲೇ ಥಟ್ ಅಂತ ಬಿಡಿಸುವ ಚಾಣಾಕ್ಷತನ ಇರುವವರು ನಮ್ಮ ನಡುವೆ ಇದ್ದಾರೆ. ನೀವು ಗಣಿತ ಪ್ರೇಮಿಯಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಪ್ರಶ್ನೆ ಇದೆ.

ಮೇಲ್ನೋಟಕ್ಕೆ ಇದು ಸರಳ ಪ್ರಶ್ನೆ ಎನ್ನಿಸಿದರೂ ಸರಿಯಾದ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸವಾಲು. ಇಲ್ಲಿರುವುದು ಸುಲಭವಾದ ಕೂಡಿಸುವ ಲೆಕ್ಕಾಚಾರ. ಆದರೂ ಇದರಲ್ಲಿ ಕೆಲವು ಟ್ವಿಸ್ಟ್ ಇದೆ. ಈ ಟ್ವಿಸ್ಟ್‌ಗಳು ನಿಮ್ಮ ಮೆದುಳಿನಲ್ಲಿ ಚಿಟ್ಟೆ ಬಿಟ್ಟಂತಹ ಅನುಭವ ಕೊಡುವುದು ಖಂಡಿತ. ಗಣಿತದ ಲೆಕ್ಕಾಚಾರ ಸುಲಭವಿದ್ರೂ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯವುದು ಸುಲಭದ ಮಾತಲ್ಲ.

ಇಂದಿನ ಬ್ರೈನ್ ಟೀಸರ್‌ನಲ್ಲಿ ಇರುವುದು ಕೂಡಿಸುವ ಲೆಕ್ಕಾಚಾರ. 22 + 4 = 24, 13 + 6 = 16, 80 + 2 = 82, 67 + 9 = ಎಷ್ಟು ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಸರಿ ಉತ್ತರ ಹೇಳಬೇಕು. ಶೇ 98ರಷ್ಟು ಮಂದಿಗೆ ಸರಿ ಉತ್ತರ ಹೇಳಲು ಸಾಧ್ಯವಾಗದ ಪ್...