ಭಾರತ, ಏಪ್ರಿಲ್ 23 -- ಗಣಿತದ ಪಜಲ್‌ ಬಿಡಿಸುವ ಹವ್ಯಾಸ ನಿಮಗಿದ್ದರೆ ನಿಮಗಾಗಿ ಇಲ್ಲೊಂದು ಪಜಲ್‌ ಇದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆಗಿರುವ ಈ ಪಜಲ್‌ ನೋಡಿದಾಗ ಇದೇನು ಮಹಾ ಎನ್ನಿಸಿದರೂ ಇದಕ್ಕೆ ಉತ್ತರ ಕಂಡು ಹಿಡಿಯುವುದು ನಿಜಕ್ಕೂ ಕಷ್ಟ ಎನ್ನಿಸಬಹುದು. ಗಣಿತದಲ್ಲಿ ಶಾರ್ಪ್‌ ಇದ್ದರೆ ಈ ಬ್ರೈನ್‌ ಟೀಸರ್‌ಗೆ ನೀವು ಉತ್ತರ ಕಂಡುಕೊಳ್ಳಬಹುದು. ಆದರೆ ಕೇವಲ 20 ಸೆಕೆಂಡ್‌ನಲ್ಲಿ ಇದಕ್ಕೆ ಉತ್ತರ ಕಂಡುಹಿಡಿಯಬೇಕು.

ʼEasy Daily Quizʼ ಎಂಬ ಎಕ್ಸ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿದೆ. ಈ ಪುಟದಲ್ಲಿ ಆಗಾಗ ಬ್ರೈನ್‌ ಟೀಸರ್‌ ಹಾಗೂ ಗಣಿತದ ಪಜಲ್‌ಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಇಂದಿನ ಪಜಲ್‌ಗೆ ʼಇಂದಿನ ಸುಲಭ ಪಜಲ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ?ʼ ಎಂದು ಶೀರ್ಷಿಕೆ ಬರೆದುಕೊಂಡು ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಚಿತ್ರದಲ್ಲಿ ಮಿಸ್‌ ಆಗಿರುವ ಸಂಖ್ಯೆ ಯಾವುದು ಎಂದು ಇದರಲ್ಲಿ ಪ್ರಶ್ನೆ ಕೇಳಿದ್ದಾರೆ. ಇಲ್ಲಿರುವ ಚಿತ್ರದಲ್ಲಿ ಒಂದು ವೇಳೆ 11*11=>4, 22*22...