ಭಾರತ, ಮೇ 11 -- ಸಾಮಾಜಿಕ ಜಾಲತಾಣಗಳು ಅಗ್ರಸ್ಥಾನ ಪಡೆದಿರುವ ಈ ಜಗತ್ತಿನಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಟ್ರೆಂಡ್‌ಗಳು ಬದಲಾಗುತ್ತಿರುತ್ತವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್‌ ಟೀಸರ್‌ ಟ್ರೆಂಡ್‌ಗಳು ಮಾತ್ರ ಬದಲಾಗದೇ ಉಳಿದಿವೆ. ಅದರಲ್ಲೂ ಗಣಿತದ ಪಜಲ್‌ ಇರುವ ಬ್ರೈನ್‌ ಟೀಸರ್‌ಗಳಿಗೆ ವಿಶೇಷ ಅಭಿಮಾನಿಗಳಿದ್ದಾರೆ. ನೆಟ್ಟಿಗರು ಈ ಬ್ರೈನ್‌ ಟೀಸರ್‌ಗಳಿಗೆ ಉತ್ತರ ಕಂಡುಹಿಡಿಯಲು ಕಾಯುತ್ತಿರುತ್ತಾರೆ. ಇದು ಹಲವರಿಗೆ ಟೈಮ್‌ಪಾಸ್‌ಗೆ ಹೇಳಿ ಮಾಡಿಸಿದ ಗೇಮ್‌ನಂತಾಗಿದೆ. ನೀವು ಕೂಡ ಬ್ರೈನ್‌ ಟೀಸರ್‌ ಪ್ರೇಮಿಯಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಚಿತ್ರವಿದೆ.

ಇಂದಿನ ಬ್ರೈನ್‌ ಟೀಸರ್‌ನಲ್ಲಿ ಇರೋದು ಗಣಿತದ ಪಜಲ್‌. ಹಾಗಂತ ಇದು ಸುಲಭ ಗಣಿತ ಖಂಡಿತ ಅಲ್ಲ. ಲಾಜಿಕಲ್‌ ಥಿಂಕಿಂಗ್‌ ಇರುವ ಈ ಗಣಿತದ ಪಜಲ್‌ ನಿಮ್ಮ ಮೆದುಳಿಗೆ ಒಂದಿಷ್ಟು ಕೆಲಸ ಕೊಡುತ್ತದೆ. ಇದರಲ್ಲಿ 4 ಪ್ರಶ್ನೆ ಇದ್ದು, 3 ಕ್ಕೆ ಉತ್ತರ ಕೊಡಲಾಗಿದೆ, 4 ನೇ ಸೂತ್ರಕ್ಕೆ ಸರಿ ಉತ್ತರ ಹೇಳಬೇಕಾಗಿರುವುದು ನಿಮಗಿರುವ ಸವಾಲು.

Brainy Quiz ಎನ್ನು...