ಭಾರತ, ಫೆಬ್ರವರಿ 21 -- ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುತ್ತವೆ. ಒಮ್ಮೆ ಇದನ್ನು ನೋಡಿದ ನಂತರ ಉತ್ತರ ಕಂಡುಹುಡುಕದ ಹೊರತು ಮನಸ್ಸಿಗೆ ಸಮಾಧಾನ ಸಿಗುವುದಿಲ್ಲ. ಇದು ನಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ನಮ್ಮಲ್ಲಿ ಯೋಚನಾಶಕ್ತಿ ವೃದ್ಧಿಯಾಗುವಂತೆ ಮಾಡುತ್ತದೆ. ಇಂದಿನ ಬ್ರೈನ್ ಟೀಸರ್ ತುಂಬಾನೇ ಟ್ರಿಕ್ಕಿ ಆಗಿದ್ದು ಇದಕ್ಕೆ ಸರಿ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸವಾಲು.

ಈ ಚಿತ್ರ ತುಂಬಾ ಸರಳವಾಗಿದೆ. ಇದರಲ್ಲಿ ಮೂರು ಜನರಿದ್ದಾರೆ. ಮಧ್ಯದಲ್ಲಿರುವ ವ್ಯಕ್ತಿ ಬ್ಯಾಟ್ ಹಿಡಿದು ನಗುತ್ತಾ ನಿಂತಿದ್ದಾನೆ. ಪಕ್ಕದಲ್ಲಿ ಒಬ್ಬಳು ಹುಡುಗಿ ನಿಂತಿದ್ದರೆ ಬಲಭಾಗದಲ್ಲಿ ಒಬ್ಬ ವ್ಯಕ್ತಿ ಪೆಚ್ಚುಮೋರೆ ಹಾಕಿ ನಿಂತಿದ್ದಾನೆ. ಇವರ ಹಿಂಭಾಗದಲ್ಲಿ ಹೂಜಿಯೊಂದು ಒಡೆದಿದೆ. ಈ ಹೂಜಿಯನ್ನು ಒಡೆದಿರುವುದು ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು. ಹಾಗಂತ ನಿಮ್ಮ ಮನಸ್ಸಿಗೆ ತೋಚಿದಷ್ಟು ಸಮಯ ತೆಗೆದುಕೊಂಡು ಚಿತ್ರವನ್ನು ನೋಡಿ ಉತ್ತರ ಹೇಳುವ ಹಾಗಿಲ್ಲ. ಕೇವಲ 10 ಸೆಕೆಂಡ್‌ ಒಳಗೆ ನೀವು ಇದಕ್ಕೆ ಸರಿಯಾದ ಉತ್ತರ ಹ...