ಭಾರತ, ಏಪ್ರಿಲ್ 15 -- ಮೆದುಳಿಗೆ ಜಡ ಹಿಡಿದಂತಾಗಿ, ಬೇಸರ ಕಾಡುತ್ತಿದ್ಯಾ, ನಿಮ್ಮ ಮೆದುಳನ್ನ ಸಾಣೆ ಹಿಡಿಯುವ ಸಲುವಾಗಿಯೇ ಬ್ರೈನ್‌ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಈ ಬ್ರೈನ್‌ ಟೀಸರ್‌ಗಳು ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತವೆ. ಬ್ರೈನ್‌ ಟೀಸರ್‌ಗಳಲ್ಲಿ ಇರುವ ಗಣಿತದ ಪಜಲ್‌ಗಳು ನಿಮ್ಮನ್ನು ಒಂದಿಷ್ಟು ಸಮಯ ಹಿಡಿದಿಡುವುದು ಸುಳ್ಳಲ್ಲ. ಇಲ್ಲೊಂದು ಬೆಂಕಿಕಡ್ಡಿಗಳಿಂದ ರಚಿತವಾದ ಗಣಿತದ ಚಿತ್ರವಿದೆ. ಇದರಲ್ಲಿ ಒಂದಿಷ್ಟು ಬೆಂಕಿಕಡ್ಡಿಗಳನ್ನು ಉದ್ದಕ್ಕೆ ಅಡ್ಡಕ್ಕೆ ಜೋಡಿಸಲಾಗಿದೆ. ಅವುಗಳನ್ನು ಬಳಸಿಕೊಂಡು ಸಮೀಕರಣವನ್ನು ರಚಿಸಬೇಕು. ಇದಕ್ಕೆ ನೀವು ಸೃಜನಾತ್ಮಕವಾಗಿ ಯೋಚಿಸುವುದು ಮುಖ್ಯವಾಗುತ್ತದೆ. ಹಾಗಾದರೆ ಈ ಚಿತ್ರದಿಂದ ಯಾವ ಸಮೀಕರಣವನ್ನು ರಚಿಸಬಹುದು, ಉತ್ತರ ಹೇಳಿ.

ರೆಡ್ಡಿಟ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿರುವ ಬ್ರೈನ್‌ ಟೀಸರ್‌ ಇದಾಗಿದೆ. ಇದರಲ್ಲಿರುವ ಪ್ರಶ್ನೆ ಹೀಗಿದೆ. ʼಮೂರು ಬೆಂಕಿಕಡ್ಡಿಗಳನ್ನು ಸರಿಸುವ ಮೂಲಕ ಈ ಗಣಿತ ಸೂತ್ರಕ್ಕೆ ಉತ್ತರ ಕಂಡುಹಿಡಿಯಿರಿ: 5-8=0ʼ...