ಭಾರತ, ಮಾರ್ಚ್ 15 -- Brain Teaser: ಕೆಲವೊಮ್ಮೆ ನಮ್ಮ ಕಣ್ಣು ನಮಗೆ ಮೋಸ ಮಾಡುತ್ತದೆ. ನಾವು ಕಂಡು ಯಾವುದೋ ಒಂದು ಚಿತ್ರ ಅಥವಾ ದೃಶ್ಯವನ್ನು ಒಮ್ಮೆ ಕಂಡಾಗ ಇಲ್ಲದೇ ಇರುವುದು ಇನ್ನೊಮ್ಮೆ ಕಾಣಿಸಬಹುದು ಅಥವಾ ಕೆಲವೊಮ್ಮೆ ಹಿಂದೆ ಕಂಡಿದ್ದು ಮತ್ತೆ ಕಾಣಿಸದೇ ಇರಬಹುದು. ಇಂತಹ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಷನ್‌ಗಳು ಎಂದು ಕರೆಯುತ್ತಾರೆ. ಈ ಚಿತ್ರಗಳು ನಮ್ಮ ಕಣ್ಣಿಗೆ ಮೋಸ ಮಾಡುವಂತೆ ಇರುವಂತೆ ಇರುತ್ತವೆ. ಇಂತಹ ಚಿತ್ರಗಳನ್ನು ರೂಪಿಸಿ ಇದನ್ನು ಬ್ರೈನ್ ಟೀಸರ್ ರೂಪದಲ್ಲಿ ಸವಾಲು ಹಾಕಲಾಗುತ್ತದೆ.

ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲೂ ಇಂಥದ್ದೊಂದು ಕಣ್ಣಿಗೆ ಸವಾಲು ಹಾಕುವ ಚಿತ್ರವೊಂದಿದೆ. ಈ ಚಿತ್ರದಲ್ಲಿ ಸುಂದರ ಫ್ಲೆಮಿಂಗೋ ಪಕ್ಷಿಗಳ ರಾಶಿಯನ್ನು ನೋಡಬಹುದು. ಕಮಲಗಳು ಅರಳಿರುವ ಕೆರೆಯಲ್ಲಿ ಫ್ಲೆಮಿಂಗೋ ಪಕ್ಷಿಗಳು ತುಂಬಿವೆ. ಈ ಸುಂದರ ದೃಶ್ಯದಲ್ಲಿ ನೀವು ಮಹಿಳೆಯನ್ನು ಹುಡುಕಬೇಕು. ಅಂದರೆ ಈ ಫ್ಲೇಮಿಂಗೊಗಳ ಮಧ್ಯದಲ್ಲಿ ಮಹಿಳೆಯೊಬ್ಬಳು ಅಡಗಿ ಕೂತಿದ್ದಾಳೆ. ಅವಳು ಎಲ್ಲಿದ್ದಾಳೆ ಎಂಬುದನ್ನು ನೀವು ಕಂಡುಹಿಡಿಯಬೇಕು.

ಈ ಚಿತ...