ಭಾರತ, ಫೆಬ್ರವರಿ 10 -- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮೆಚ್ಚುಗೆ ಗಳಿಸುತ್ತಿದೆ. ಯಾಕೆಂದರೆ ಈ ಚಿತ್ರಗಳು ನೋಡಲು ವಿಭಿನ್ನವಾಗಿದ್ದು ಕಣ್ಣಿಗೆ ಸವಾಲು ಹಾಕುತ್ತವೆ. ಸುಂದರವಾಗಿದ್ದರೂ ವಿಲಕ್ಷಣವಾಗಿ ಕಾಣಿಸುವ ಈ ಚಿತ್ರಗಳಲ್ಲಿ ಕಣ್ಣು, ಮೆದುಳಿಗೆ ಪ್ರಶ್ನೆ ಹಾಕುವ ಸವಾಲುಗಳಿರುತ್ತವೆ. ಆ ಕಾರಣಕ್ಕೆ ಹಲವರು ಬ್ರೈನ್ ಟೀಸರ್, ಆಪ್ಟಿಕಲ್ ಇಲ್ಯೂಷನ್‌ಗಳನ್ನು ಇಷ್ಟಪಡುತ್ತಾರೆ.

ಬಹಳ ಬುದ್ಧಿವಂತಿಕೆಯಿಂದ ಈ ಚಿತ್ರಗಳನ್ನು ವಿನ್ಯಾಸ ಮಾಡಲಾಗುತ್ತದೆ. ಎಷ್ಟೇ ಬುದ್ಧಿವಂತರು ನೀವಾದ್ರೂ ಇದನ್ನು ಬೇಧಿಸಿ, ಉತ್ತರ ಕಂಡುಹಿಡಿಯಲು ಪರದಾಡಬೇಕಾಗುತ್ತದೆ. ಆದರೆ ಇದರಿಂದ ಮಜಾ ಸಿಗುವುದಂತೂ ಖಂಡಿತ. ಬ್ರೈನ್ ಟೀಸರ್‌ಗಳು ಟೈಮ್ ಪಾಸ್‌ ಮಾಡಲು ಉತ್ತಮ ಸರಕು ಎಂದರೂ ತಪ್ಪಾಗಲಿಕ್ಕಿಲ್ಲ. ಆ ಕಾರಣಕ್ಕೂ ಇದು ನೆಟ್ಟಿಗರಿಗೆ ಅಚ್ಚುಮೆಚ್ಚು ಎನ್ನಿಸಿದೆ.

@br4inteaserhub ಎನ್ನುವ ಇನ್‌ಸ್ಟಾಗ್ರಾಂ ಪುಟದಲ್ಲಿ ವಿಭಿನ್ನವಾದ ಒಂದು ಬ್ರೈನ್ ಟೀಸರ್‌ ಅನ್ನು ಪೋಸ್ಟ್ ಮಾಡಲಾಗಿದೆ. ಹೊಳೆ ಹಾಗೂ ಕಾಡಿನ ದೃಶ್ಯವಿರುವ...