ಭಾರತ, ಫೆಬ್ರವರಿ 8 -- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವಿಲಕ್ಷಣವಾಗಿರುತ್ತವೆ, ಅಂದರೆ ನಮ್ಮ ಕಣ್ಣಿಗೆ ಕಂಡಿದ್ದು ಇನ್ನೊಬ್ಬರ ಕಣ್ಣಿಗೆ ಬೇರೆಯದ್ದೇ ರೀತಿ ಕಾಣಿಸುತ್ತದೆ. ಜೊತೆಗೆ ಇದು ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಆ ಕಾರಣಕ್ಕೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತದೆ.

ಸವಾಲು ಹಾಕುವಂತಿದ್ದರೂ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನೆಟ್ಟಿಗರಿಗೆ ತುಂಬಾನೇ ಇಷ್ಟವಾಗುತ್ತದೆ. ಇದರಿಂದ ಮೋಜು ಸಿಗುತ್ತದೆ. ಜೊತೆಗೆ ಇದು ನಮ್ಮ ಬುದ್ಧಿಯನ್ನು ಚುರುಕು ಮಾಡುತ್ತದೆ. ಮಾತ್ರವಲ್ಲ ನಮ್ಮ ಯೋಚನಾಶಕ್ತಿಯನ್ನೂ ವೃದ್ಧಿಸುತ್ತದೆ. ಇಂದಿನ ಬ್ರೈನ್ ಟೀಸರ್‌ನಲ್ಲಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ಕಣ್ಣೇ ನಿಮಗೆ ಮೋಸ ಮಾಡುವಂತೆ ಮಾಡುವುದು ಸುಳ್ಳಲ್ಲ.

ಇಂದಿನ ಬ್ರೈನ್ ಟೀಸರ್‌ನಲ್ಲಿ ಹಸಿರು ಬಣ್ಣದ ಒಂದು ಚಿತ್ರವಿದೆ. ಅದರಲ್ಲಿ ಕೆಲವು ನಂಬರ್‌ಗಳನ್ನು ಬರೆಯಲಾಗಿದೆ. ಆ ನಂಬರ್‌ಗಳು ಮೇಲ್ನೋಟಕ್ಕೆ ಕಾಣಿಸಲು ಸಾಧ್ಯವಿಲ್ಲ, ಸೂಕ್ಷ್ಮವಾಗಿ ನೋಡಿದಾಗ ನಂಬರ್ ಕಾಣಿಸುತ್ತದೆ. ಆದರೆ ಅ...