ಭಾರತ, ಮಾರ್ಚ್ 12 -- Brain Teaser: ಆಪ್ಟಿಕಲ್ ಇಲ್ಯೂಷನ್‌ಗಳು ಎಂದರೆ ನಮ್ಮಲ್ಲಿ ಭ್ರಮೆ ಹುಟ್ಟಿಸುವ ಚಿತ್ರಗಳು. ಈ ಚಿತ್ರ ಬೇರೆಯದ್ದಕ್ಕಿಂತ ಭಿನ್ನವಾಗಿರುತ್ತದೆ. ನೀವು ಒಮ್ಮೆ ನೋಡಿದಾಗ ನಮಗೆ ಕಂಡಿದ್ದನ್ನು ಇನ್ನೊಮ್ಮೆ ನೋಡಿದಾಗ ಬೇರೆಯದ್ದೇ ರೀತಿ ಕಾಣಿಸುವ ಚಿತ್ರಗಳು. ಟ್ರಿಕ್ಕಿ ಎನ್ನಿಸುವ ಈ ಚಿತ್ರಗಳು ನಮ್ಮ ಮನಸ್ಸಿಗೆ ಸವಾಲು ಹಾಕುವುದು ಸುಳ್ಳಲ್ಲ. ಇವಕ್ಕೆ ಉತ್ತರ ಕಂಡುಹಿಡಿಯಲು ನಮ್ಮ ಮೆದುಳು ಹಾಗೂ ಕಣ್ಣು ತುಂಬಾನೇ ಸೂಕ್ಷ್ಮವಾಗಿರಬೇಕು.

ಪಿಯುಷ್ ತಿವಾರಿ ಎನ್ನುವ ಎಕ್ಸ್ ಬಳಕೆದಾರರು ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದು ಪಜಲ್ ಪ್ರಿಯರ ಗಮನ ಸೆಳೆದಿರುವುದು ಮಾತ್ರವಲ್ಲ ವೈರಲ್ ಆಗಿದೆ. ಕಪ್ಪು-ಬಿಳುಪಿನ ಲೈನ್ ಡ್ರಾಯಿಂಗ್ ಇರುವ ಚಿತ್ರ ಇದಾಗಿದೆ. ಇದರಲ್ಲಿ ಮರದ ಕೊಂಬೆಯ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಚಿರತೆಯೊಂದನ್ನು ಕಾಣಬಹುದು. ಆದರೆ ಈ ಚಿತ್ರದಲ್ಲಿ ಒಂದು ಮೀನು ಕೂಡ ಅಡಗಿದೆ. ಆ ಮೀನು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಅದು ಕೇವಲ 10 ಸೆಕೆಂಡ್ ಒಳಗೆ ಸರಿ ಕಂಡು...