ಭಾರತ, ಮಾರ್ಚ್ 27 -- ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿರುವ ಬ್ರೈನ್‌ ಟೀಸರ್‌ ನೋಡೋಕೆ ಬಲು ಸುಲಭ ಅನ್ನಿಸುತ್ತೆ. ಆದ್ರೆ ಇದಕ್ಕೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸವಾಲು. ಸರಿ ಉತ್ತರ ಯಾವುದು ಎಂದು ಕಂಡುಹಿಡಿಯಲು ಸೋಷಿಯಲ್‌ ಮಿಡಿಯಾದಲ್ಲಿ ಚರ್ಚೆ ಆರಂಭವಾಗಿದೆ. ಇಲ್ಲೊಂದು ಬಾಕ್ಸ್‌ ಇದ್ದು, ಆ ಬಾಕ್ಸ್‌ನಲ್ಲಿ ಒಂದಿಷ್ಟು ನಂಬರ್‌ಗಳಿವೆ. ಆದರೆ ಕೊನೆಯ ನಂಬರ್‌ ಮಾತ್ರ ಮಿಸ್‌ ಆಗಿದೆ. ಮಿಸ್‌ ಆಗಿರುವ ಆ ನಂಬರ್‌ ಯಾವುದು, ನೀವು ಗಣಿತಪ್ರೇಮಿಯಾಗಿದ್ದರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ನಿಮಗೆ ಸವಾಲು ಎನ್ನಿಸುವುದಿಲ್ಲ. ಆದರೆ ಇದಕ್ಕೆ ಪೆನ್ನು-ಪೇಪರ್‌ ಹಾಗೂ ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಕಂಡುಹಿಡಿಯಬೇಕು. ಈ ಪ್ರಶ್ನೆಗೆ ಉತ್ತರ ಹುಡುಕಲು ನಿಮ್ಮಿಂದ ಸಾಧ್ಯವೇ, ಟ್ರೈ ಮಾಡಿ.

@Rainmaker1973 ಎಂಬ ಎಕ್ಸ್‌ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ʼಇಂದಿನ ಸುಲಭ ಬ್ರೈನ್‌ ಟೀಸರ್‌ಗೆ ಉತ್ತಮ ಕಂಡುಹಿಡಿಯಲು ಸಾಧ್ಯವೇ? ಎಂದು ಶೀ...