ಭಾರತ, ಜನವರಿ 29 -- ಕಣ್ಣಿಗೆ ಕಂಡಿದ್ದೆಲ್ಲಾ ಸತ್ಯವಲ್ಲ, ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಅಂತೆಲ್ಲಾ ಗಾದೆ ಮಾತುಗಳನ್ನು ನೀವು ಕೇಳಿರಬಹುದು. ಇಂದಿನ ಬ್ರೈನ್ ಟೀಸರ್ ಚಿತ್ರಕ್ಕೆ ಈ ಮಾತು ತುಂಬಾನೇ ಹೊಂದಿಕೆಯಾಗುತ್ತದೆ. ಇಂದಿನ ಬ್ರೈನ್‌ ಟೀಸರ್ ಚಿತ್ರ ನಿಮ್ಮ ಕಣ್ಣಿಗೆ ಸವಾಲು ಹಾಕುವಂತಿದೆ. ಬ್ಲರ್ ಆಗಿ ಕಾಣಿಸುವ ಈ ಚಿತ್ರದೊಳಗೆ ಒಂದು ನಂಬರ್ ಇದೆ. ಆ ನಂಬರ್ ಯಾವುದು ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು.

ಕಪ್ಪು ಬಣ್ಣ ಚಿತ್ರದ ಮೇಲೆ ಬಿಳಿ ಬಣ್ಣದ ಗೆರೆಗಳಿಂದ ಕೂಡಿರುವ ಈ ಚಿತ್ರದಲ್ಲಿ ಅಡಗಿರುವ ನಂಬರ್ ಯಾವುದು ಎಂದು ನೀವು ಹೇಳಬೇಕು. ಈ ಚಿತ್ರವನ್ನು ದಿಟ್ಟಿಸಿ ನೋಡಿದ್ರೆ ಕಣ್ಣು ನೋವು ಬರೋದು ಖಂಡಿತ. ಆದರೂ ಇದನ್ನು ದಿಟ್ಟಿಸಿ ನೋಡಿದ್ರೆ ಮಾತ್ರ ನೀವು ಉತ್ತರ ಕಂಡುಹಿಡಿಯಲು ಸಾಧ್ಯವಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬ್ರೈನ್ ಟೀಸರ್ ವೈರಲ್ ಆಗಿದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಸಲುವಾಗಿ ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಕೆಲವರು ಐದಾರು ಸೆಕೆಂಡ್‌ನಲ್ಲಿ ಸರಿ ಉತ್ತರ ಕಂಡುಹಿಡಿದಿದ್ದಾರೆ. Br...