ಭಾರತ, ಮಾರ್ಚ್ 13 -- Brain Teaser: ಬ್ರೈನ್ ಟೀಸರ್‌ಗಳು ಎಂದರೆ ಕೇವಲ ಮೋಜು ನೀಡುವ ಚಿತ್ರಗಳಲ್ಲ, ಇವು ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವ ಕೆಲಸವನ್ನೂ ಮಾಡುತ್ತವೆ. ಬ್ರೈನ್ ಟೀಸರ್‌ಗಳಲ್ಲಿ ಹಲವಾರು ಪ್ರಕಾರಗಳಿವೆ. ಗಣಿತ ಸೂತ್ರಗಳು, ಪಜಲ್‌ಗಳು, ಕ್ವಿಜ್‌ಗಳು, ಜೊತೆ ಆಪ್ಟಿಕಲ್ ಇಲ್ಯೂಷನ್‌ಗಳು ಕೂಡ ಬ್ರೈನ್ ಟೀಸರ್‌ ಸಾಲಿಗೆ ಸೇರುತ್ತವೆ. ಆಪ್ಟಿಕಲ್ ಇಲ್ಯೂಷನ್‌ಗಳು ದೃಶ್ಯ ಗ್ರಹಿಕೆಗೆ ಮಾತ್ರವಲ್ಲ ನಮ್ಮ ಅರಿವಿನ ಸಾಮರ್ಥ್ಯಗಳಿಗೂ ಸವಾಲು ಹಾಕುತ್ತವೆ.

ನೀವು ಬ್ರೈನ್ ಟೀಸರ್ ಅಭಿಮಾನಿಯಾಗಿದ್ರೆ ನಿಮಗಾಗಿ ಇಲ್ಲೊಂದು ಮೆದುಳಿಗೆ ಹುಳ ಬಿಡುವ ಸವಾಲಿದೆ. ಸವಾಲು ಕೇಳಲು ಸುಲಭ ಎನ್ನಿಸಿದರೂ ಉತ್ತರ ಕಂಡುಕೊಳ್ಳುವುದು ನಿಜಕ್ಕೂ ಸುಲಭವೇನಲ್ಲ.

ಪಿಯೂಷ್ ತಿವಾರಿ ಎನ್ನುವ ಎಕ್ಸ್ ಬಳಕೆದಾರರು ತಮ್ಮ ಖಾತೆಯಲ್ಲಿ ಈ ಬ್ರೈನ್ ಟೀಸರ್‌ ಅನ್ನು ಪೋಸ್ಟ್ ಮಾಡಿದ್ದಾರೆ. ಕಾಡಿನ ಸುಂದರ ದೃಶ್ಯದ ನಡುವೆ ಸೂರ್ಯ ಮೂಡುತ್ತಿರುವ ಅಥವಾ ಮುಳುಗುತ್ತಿರುವುದನ್ನು ನೀವು ಕಾಣಬಹುದು. ಬಾನೆಲ್ಲ ಕೆಂಪಾಗಿ ರಂಗಾಗಿ ಕಾಣಿಸುತ್ತಿದೆ. ಮರ ಗಿಡಗಳ ನಡು...