ಭಾರತ, ಮಾರ್ಚ್ 8 -- ಬ್ರೈನ್ ಟೀಸರ್‌ಗಳು ಎಂದರೆ ಮನಸ್ಸಿಗೆ ಮೋಜು ನೀಡಿ, ನಮಗೆ ಟೈಮ್‌ಪಾಸ್ ಮಾಡಿಸುವ ಚಿತ್ರಗಳು ಮಾತ್ರವಲ್ಲ, ಇವು ನಮ್ಮ ಮೆದುಳಿನ ಸಾಮರ್ಥ್ಯವನ್ನು ಪರೀಕ್ಷೆ ಮಾಡುವ ಚಿತ್ರಗಳೂ ಹೌದು. ಇದರಿಂದ ನಮ್ಮ ಐಕ್ಯೂ ಲೆವೆಲ್ ಹೇಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬಹುದು. ಇಂದಿನ ಬ್ರೈನ್ ಟೀಸರ್‌ ಕೂಡ ನಿಮ್ಮ ಐಕ್ಯೂ ಲೆವೆಲ್ ಪರೀಕ್ಷೆ ಮಾಡುವಂಥದ್ದು ಎಂದರೆ ತಪ್ಪಾಗಲಿಕ್ಕಿಲ್ಲ.

ಈ ಬ್ರೈನ್ ಟೀಸರ್‌ನಲ್ಲಿ ಒಂದು ಮರದ ಕಟ್ಟಿಗೆಯನ್ನು ಹೆಗಲಿನ ಮೇಲೆ ಹೊತ್ತು 3 ಮಂದಿ ಸಾಗುತ್ತಿದ್ದಾರೆ. ಇದರಲ್ಲಿ ಮೊದಲಿನ ವ್ಯಕ್ತಿ ಹಸಿರು ಅಂಗಿ ಹಾಕಿದ್ದು, ಎರಡನೇ ವ್ಯಕ್ತಿ ಕೆಂಪು ಅಂಗಿ ಹಾಕಿದ್ದಾನೆ. ಮೂರನೇ ವ್ಯಕ್ತಿ ಬಿಳಿ, ನೇರಳೆ ಬಣ್ಣದ ಅಂಗಿ ಹಾಕಿದ್ದಾನೆ. ಈ ಮೂವರು ಸಮಾನವಾಗಿ ಮರದ ಕಟ್ಟಿಗೆಯನ್ನು ಹೊತ್ತು ಸಾಗುತ್ತಿದ್ದಾರೆ ಎಂದು ನಮಗೆ ಅನ್ನಿಸುತ್ತದೆ. ಆದರೆ ಈ ಮೂವರಲ್ಲಿ ಒಬ್ಬ ಮಾತ್ರ ಹೆಚ್ಚು ಭಾರ ಹೊರುತ್ತಿದ್ದಾನೆ. ಹಾಗಾದರೆ ಮೂವರಲ್ಲಿ ಹೆಚ್ಚು ಭಾರ ಹೊರುತ್ತಿರುವ ವ್ಯಕ್ತಿ ಯಾರು ಎಂದು ನೀವು ಕಂಡುಹಿಡಿಯಬೇಕು.

ಚಿತ್...