ಭಾರತ, ಏಪ್ರಿಲ್ 18 -- ಗಣಿತದಲ್ಲಿ ಎಂತಹ ಸೂತ್ರ, ಸಮೀಕರಣ ಇದ್ರು ಅದನ್ನು ಥಟ್ಟಂತ ಬಿಡಿಸ್ತೀನಿ ಅನ್ನುವ ಆತ್ಮವಿಶ್ವಾಸ ನಿಮಗಿದ್ಯಾ, ಹಾಗಿದ್ರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದು ನಿಮ್ಮ ಗಣಿತ ಕೌಶಲವನ್ನು ಪರೀಕ್ಷೆ ಮಾಡುವುದು ಸುಳ್ಳಲ್ಲ. ಇದು ಗಣಿತದ ಬೇಸಿಕ್‌ಗಳನ್ನು ಹೊಂದಿದ್ದರೂ ಉತ್ತಮ ಕಂಡುಹಿಡಿಯಲು ಕೂತಾಗ ನಿಮಗೆ ತಲೆ ಬಿಟ್ಟು ಹಿಡಿಸೋದು ಪಕ್ಕಾ. ಆರಂಭದಲ್ಲಿ ಕಂಡಾಗ ಇದೇನು ಮಹಾ, ಇದು ತುಂಬಾ ಸುಲಭ ಎಂದು ನಿಮಗೆ ಅನ್ನಿಸಬಹುದು. ಆದರೆ ಉತ್ತರ ಅಷ್ಟು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ ಬಿಡಿ. ಸರಿ ಹಾಗಿದ್ರೆ ಈ ಚಾಲೆಂಜ್‌ ಸ್ವೀಕರಿಸಲು ನೀವು ಸಿದ್ಧರಿದ್ದೀರಾ?

ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡ ಬ್ರೈನ್‌ ಟೀಸರ್‌ ಇದಾಗಿದೆ. puzzles ಎಂಬ ರೆಡ್ಡಿಟ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು, ಈ ಪೇಜ್‌ನಲ್ಲಿ ಇದೇ ರೀತಿಯ ಹಲವು ಬ್ರೈನ್‌ ಟೀಸರ್‌ಗಳಿವೆ. ಇಲ್ಲಿರುವ ಕೂಡಿಸು, ಕಳೆ, ಗುಣಿಸು, ಭಾಗಿಸು ಹಾಗೂ ಬ್ರಾಕೆಟ್‌ಗಳನ್ನು ಬಳಸಿಕೊಂಡು 10ಕ್ಕೆ ಸಮನಾದ 4 ಸಂಖ್ಯೆಗಳನ್ನು ಕಂಡುಹಿಡಿಯಬೇಕು ಎಂದು ಅವ...