Delhi, ಫೆಬ್ರವರಿ 16 -- Bourbon whiskey: ದೆಹಲಿ: ಭಾರತದಲ್ಲಿ ಪ್ರತಿಷ್ಠಿತ ಬೋರ್ಬನ್‌ ವಿಸ್ಕಿ ದರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದು ಶೇ. 150 ರಷ್ಟು ವಿಧಿಸಲಾಗಿದ್ದ ಸುಂಕದ ಪ್ರಮಾಣವನ್ನು ಶೇ. 100ಕ್ಕೆ ಇಳಿಕೆ ಮಾಡಲಾಗಿದೆ. ಅಂದರೆ ಭಾರತ ಸರ್ಕಾರವೂ ಬೋರ್ಬನ್‌ ವಿಸ್ಕಿ ಮೇಲಿನ ಸುಂಕವನ್ನು ಶೇ.50ರಷ್ಟು ಕಡಿತ ಮಾಡಲಾಗಿದೆ. ದಕ್ಷಿಣ ಏಷ್ಯಾದ ಮಾರುಕಟ್ಟೆಗಳಲ್ಲಿ "ಅತ್ಯಂತ ಅನ್ಯಾಯದ" ಸುಂಕಗಳನ್ನು ವಿಧಿಸಲಾಗುತ್ತಿದ್ದು. ಇದನ್ನು ಒಪ್ಪಲಾಗದು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ ಬೆನ್ನಲ್ಲೇ ಭಾರತವು ಬೋರ್ಬನ್ ವಿಸ್ಕಿ ಮೇಲಿನ ಸುಂಕವನ್ನು ಶೇಕಡಾ 150 ರಿಂದ 100 ಕ್ಕೆ ಇಳಿಸಿರುವುದಾಗಿ ಘೋಷಿಸಿದೆ. ಇದರಿಂದ ಅಮೆರಿಕಾ ಮೂಲದ ಬೋರ್ಬನ್‌ ವಿಸ್ಕಿ ದರ ಭಾರತದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಸ್ವಲ್ಪ ಮುಂಚಿತವಾಗಿ ಫೆಬ್ರವರಿ 13 ರಂದು ಕಸ್ಟಮ್ಸ್ ಸುಂಕವನ್ನು ಶೇ.50 ರಷ್ಟು ಕಡಿತಗೊಳಿಸುವ ಸೂಚನೆ ನೀಡಲಾಯಿತು. ಬೋರ್ಬನ್ ಮೇಲಿ...