ಭಾರತ, ಫೆಬ್ರವರಿ 27 -- Shakeela Movie OTT: ಕನ್ನಡದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾದ ಇಂದ್ರಜಿತ್‌ ಲಂಕೇಶ್‌ 2020ರಲ್ಲಿ ಶಕೀಲಾ ಎಂಬ ಹಿಂದಿ ಸಿನಿಮಾವನ್ನು ನಿರ್ದೇಶಿಸಿದ್ದರು. ಶಕೀಲಾ ಜೀವನಚರಿತ್ರೆ ಆಧರಿತ ಈ ಸಿನಿಮಾದಲ್ಲಿ ಅಭಿನೇತ್ರಿಯ ಪಾತ್ರದಲ್ಲಿ ರಿಚಾ ಚಡ್ಡಾ ನಟಿಸಿದ್ದರು. ಈ ಹಿಂದಿ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಗೆ ಇತ್ತೀಚೆಗೆ ಸೇರ್ಪಡೆಗೊಂಡಿದೆ. ವಿಶೇಷವೆಂದರೆ, ಎರಡು ಮೂರು ವರ್ಷಗಳ ಹಿಂದೆಯೇ ಈ ಸಿನಿಮಾ ವಿವಿಧ ಒಟಿಟಿಗಳಲ್ಲಿ ಬಿಡುಗಡೆಯಾಗಿತ್ತು. ಒಟಿಟಿ ಪ್ಲೇನಲ್ಲಿ, ಏರ್‌ಟೆಲ್‌ ಎಕ್ಸ್‌ಟ್ರೀಮ್‌ನಲ್ಲಿ, ಸನ್‌ನೆಕ್ಸ್ಟ್‌ನಲ್ಲಿಯೂ ಈ ಶಕೀಲಾ ಸಿನಿಮಾ ಸ್ಟ್ರೀಮಿಂಗ್‌ ಆಗಿತ್ತು. ಅಯ್ಯೋ, ಈ ಒಟಿಟಿಗೆ ಎಲ್ಲಾ ಚಂದಾದಾರರಾಗಿಲ್ಲ ಎಂದು ಹೇಳುವವರು ಯೂಟ್ಯೂಬ್‌ನಲ್ಲಿರುವ ಶಕೀಲಾ ಹಿಂದಿ ಸಿನಿಮಾವನ್ನು ಉಚಿತವಾಗಿ ನೋಡಬಹುದು. ಈ ಸಿನಿಮಾದಲ್ಲಿ ಬೋಲ್ಡ್‌ ನಟಿ ಶಕೀಲಾ ಅವರ ಬದುಕಿನ ಅನೇಕ ಕಥೆಗಳು ಇವೆ. ತೆರೆಯ ಮೇಲೆ ಮಾದಕವಾಗಿ ಕಾಣಿಸಿಕೊಂಡಿದ್ದ, ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ದ ಶಕೀಲಾರ ಬ...