Bengaluru, ಜನವರಿ 30 -- ಬೇಯಿಸಿದ ಮೊಟ್ಟೆ ತಿನ್ನುವುದೆಂದರೆ ಮಕ್ಕಳಿಂದ ತೊಡಗಿ ಎಲ್ಲರಿಗೂ ಇಷ್ಟ. ಮೊಟ್ಟೆ ತಿನ್ನುವುದರಿಂದ ಹಲವು ಲಾಭಗಳಿವೆ. ಬಹಳಷ್ಟು ಪೋಷಕಾಂಶ ಹೊಂದಿರುವ ಮೊಟ್ಟೆಯನ್ನು ಬಳಸಿಕೊಂಡು ಹಲವು ರುಚಿಕರ ಖಾದ್ಯ ತಯಾರಿಸಬಹುದು. ಅಲ್ಲದೆ, ಮೊಟ್ಟೆಯನ್ನು ಬೇಯಿಸಿ, ಅದರಲ್ಲಿ ಕೂಡ ಹಲವು ತಿನಿಸು ತಯಾರಿಸಬಹುದು ಇಲ್ಲವೇ ಹಾಗೆಯೇ ಕೂಡ ತಿನ್ನಬಹುದು. ಮೊಟ್ಟೆಯನ್ನು ಬೇಯಿಸಿ ತಿನ್ನುವುದೇನೋ ಹೌದು, ಆದರೆ ಹಾಗೆ ಮೊಟ್ಟೆ ಬೇಯಿಸಲು ಬಳಸಿದ ನೀರನ್ನು ನೀವು ಬಳಿಕ ಏನು ಮಾಡುತ್ತೀರಿ? ಬಹುತೇಕ ಎಲ್ಲರೂ ಮೊಟ್ಟೆ ಬೇಯಿಸಿದ ಬಳಿಕ ಉಳಿದ ನೀರನ್ನು ಸಿಂಕ್‌ಗೆ ಚೆಲ್ಲುತ್ತೀರಿ. ಆದರೆ ಆ ನೀರನ್ನು ಇನ್ನು ಮುಂದೆ ಚೆಲ್ಲಬೇಡಿ. ಮೊಟ್ಟೆಯಲ್ಲಿ ಹೇಗೆ ಪೋಷಕಾಂಶಗಳು ಇರುವುದೋ, ಹಾಗೆಯೇ ಮೊಟ್ಟೆ ಬೇಯಿಸಿದ ನೀರಿನಲ್ಲೂ ಹಲವು ಪೋಷಕಾಂಶಗಳು ಇರುತ್ತವೆ. ಮೊಟ್ಟೆಯನ್ನು ಬೇಯಿಸಿದಾಗ ಅದರ ಸಿಪ್ಪೆಯಿಂದ ಬೇರ್ಪಡುವ ಪೋಷಕಾಂಶಗಳು, ಮೊಟ್ಟೆ ಒಡೆದರೆ ಅದರ ಬಿಳಿಯ ಪದರದ ಅಂಶಗಳು ನೀರಿನಲ್ಲಿ ಸೇರಿಕೊಂಡಿರುತ್ತವೆ. ಮುಖ್ಯವಾಗಿ ಕ್ಯಾಲ್ಸಿಯಂ, ಮೆಗ್ನೇಷ...