Bangalore, ಏಪ್ರಿಲ್ 4 -- Bollywood actors bodyguard salary: ಬಾಲಿವುಡ್‌ ನಟಿ ನಟರು ತಮ್ಮ ರಕ್ಷಣೆಗಾಗಿ ಅಂಗರಕ್ಷಕರನ್ನು ಇಟ್ಟುಕೊಂಡಿರುತ್ತಾರೆ. ಇದೇ ಸಮಯದಲ್ಲಿ ಈ ಅಂಗರಕ್ಷಕರ ವೇತನ ಎಷ್ಟಿರಬಹುದು ಎಂಬ ಕುತೂಹಲ ಸಾಕಷ್ಟು ಜನರಿಗೆ ಇರಬಹುದು. ಶಾರೂಖ್‌ ಖಾನ್‌, ಸಲ್ಮಾನ್‌ ಖಾನ್‌, ದೀಪಿಕಾ ಪಡುಕೋಣೆ ಸೇರಿದಂತೆ ವಿವಿಧ ನಟಿಯರು, ನಟರ ಬಾಡಿಗಾರ್ಡ್‌ಗಳ ವೇತನ ಪ್ರತಿತಿಂಗಳು 25 ಸಾವಿರ ರೂನಿಂದ ಹಲವು ಲಕ್ಷ ರೂಪಾಯಿ ತನಕ ಇರುತ್ತದೆ. ಕೆಲವು ಬಾಡಿಗಾರ್ಡ್‌ಗಳ ವೇತನ ಕಂಪನಿಯೊಂದ ಸಿಇಒ ವೇತನಕ್ಕಿಂತಲೂ ಹೆಚ್ಚಿರಬಹುದು. ಅಂಗರಕ್ಷಕರ ಕೆಲಸವು ತಮ್ಮ ಸೆಲೆಬ್ರಿಟಿಯನ್ನು ಕಣ್ರೆಪ್ಪೆಯಂತೆ ಕಾಯುವುದಾಗಿದೆ. ಎಲ್ಲಾದರೂ ಯಾರಾದರೂ ಗುಂಡು ಹಾರಿಸಿದರೆ ಸೆಲೆಬ್ರಿಟಿಗೆ ಅಡ್ಡನಿಂತು ತನ್ನ ಎದೆಯೊಡ್ಡಲು ಹಿಂಜರಿಯಬಾರದು. ಅಷ್ಟೊಂದು ಅಪಾಯಕಾರಿ ಹುದ್ದೆಯೂ ಇದಾಗಿದೆ. ಸೆಲೆಬ್ರಿಟಿಗಳಿಗೆ ಸಾಕಷ್ಟು ಶತ್ರುಗಳು ಇರಬಹುದು. ಜನರ ಗುಂಪಿನಿಂದ ಯಾರೋ ಒಬ್ಬರು ತೊಂದರೆ ನೀಡಲು ಮುಂದಾಗಬಹುದು. ಇಂತಹ ಸಮಯದಲ್ಲಿ ಸೆಲೆಬ್ರಿಟಿಗೆ ಬಾಡಿ ಗಾರ್ಡ್‌ ಆಗಿ...