ಭಾರತ, ಮಾರ್ಚ್ 14 -- ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್‌, ಪರ್ಸ್‌, ಚಿನ್ನಾಭರಣ ಕಳವು ಅವ್ಯಾಹತವಾಗಿ ನಡೆಯುತ್ತಿದೆ. ಇದೇ ರೀತಿ ಬಿಎಂಟಿಸಿ ಬಸ್‌ನಲ್ಲಿ ಮೊಬೈಲ್‌ ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದ ಮೂವರು ಕಳ್ಳಿಯರನ್ನು ಬಸ್‌ ನಿರ್ವಾಹಕಿ ಮತ್ತು ಚಾಲಕ ಚಾಣಾಕ್ಷ್ಯತನದಿಂದ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೊಬೈಲ್‌ ಕಳ್ಳರ ಕಳ್ಳತನವನ್ನು ಮೊದಲು ಗುರುತಿಸಿದ ನಿರ್ವಾಹಕಿ ಈ ವಿಚಾರವನ್ನ ಚಾಲಕನ ಗಮನಕ್ಕೆ ತಂದಿದ್ದಾರೆ. ತಕ್ಷಣ, ಬಾಗಿಲುಗಳನ್ನು ಲಾಕ್‌ ಮಾಡಿದ ಚಾಲಕ ಈ ಮೂವರು ಕಳ್ಳಿಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಯಾಣಿಕರ ಮೊಬೈಲ್‌ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ ಓಜಿಕುಪ್ಪಂ ತಂಡದ ಮೂವರನ್ನು ಬೆಂಗಳೂರಿನ ಯಲಹಂಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ಪ್ರಜಾವಾಣಿ ವರದಿ ತಿಳಿಸಿದೆ. ಇವರನ್ನು ಆಂಧ್ರಪ್ರದೇಶದ ಓಜಿಕುಪ್ಪಂನವರು ಎಂದು ಗುರುತಿಸಲಾಗಿದೆ. 36 ವರ್ಷ ವಯಸ್ಸಿನ ಅಮೃತಾ, 34 ವರ್ಷದ ಕೋಕಿಲಾ ಮತ್ತು 30 ವರ್ಷ ವಯಸ್ಸಿನ ನಕ್ಷತ್ರಾ ಬಂಧಿತರು. ಇವರು ಪ್ರಯಾಣಿಕರಿಗೆ ಅನುಮಾನ ಬಾರದಂತ ಪ್ರ...