ಭಾರತ, ಏಪ್ರಿಲ್ 2 -- ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಯುನೈಟೆಡ್ ಪೇಮೆಂಟ್ ಇಂಟರ್‌ಫೇಸ್ (UPI) ಪಾವತಿ ವ್ಯವಸ್ಥೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದ್ದು, ಅದನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣ ಮಾಡಲು ಪ್ರಯಾಣಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ.

ಇದರ ಫಲಿತಾಂಶವಾಗಿ, 2025ರ ಮಾರ್ಚ್ ತಿಂಗಳಲ್ಲಿ BMTC ಟಿಕೆಟ್ ದರದ ಒಟ್ಟಾರೆ ಆದಾಯದಲ್ಲಿ 39.80% ರಷ್ಟು ಪಾವತಿ ಯುಪಿಐ ಮುಖಾಂತರ ನಡೆದಿದೆ. ಸಂಸ್ಥೆಯ ಇತ್ತೀಚಿನ ಮಾಹಿತಿ ಪ್ರಕಾರ, ಈ ಬೆಳವಣಿಗೆ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿ ಸ್ವೀಕೃತಿಯ ಮಹತ್ತರ ಸಾಧನೆಯಾಗಿ ಗುರುತಿಸಲಾಗಿದೆ. ಚೀಟಿ ಕೊಟ್ಟ ನಂತರೆ ಚಿಲ್ಲರೆಗಾಗಿ ಯಾರೂ ಪರದಾಡುವ ಪ್ರಮೇಯವೇ ಬರದ ರೀತಿಯಲ್ಲಿ ಯುಪಿಐ ಸಹಾಯ ಮಾಡಿದೆ. ಸಾಕಷ್ಟು ಜನರು ಈಗ ಡಿಜಿಟಲ್‌ ಹಣ ಪಾವತಿಯನ್ನೇ ತಮ್ಮ ಆದ್ಯತೆಯನ್ನಾಗಿಸಿಕೊಂಡಿದ್ದಾರೆ. ಆ ಕಾರಣದಿಂದಲೂ ಹೆಚ್ಚಿನ ವಹಿವಾಟಾಗುತ...