Bengaluru, ಏಪ್ರಿಲ್ 4 -- BLR Airport: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2024-25ರ ಹಣಕಾಸು ವರ್ಷದಲ್ಲಿ ಪ್ರಯಾಣಿಕ ಹಾಗೂ ಸರಕು ಕಾರ್ಯಾಚರಣೆಗಳಲ್ಲಿ ಎರಡು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ವಿಮಾನ ನಿಲ್ದಾಣದ ಮೂಲಕ 41 ದಶಲಕ್ಷ (4.1 ಕೋಟಿ) ಪ್ರಯಾಣಿಕರು ಪ್ರಯಾಣಿಸಿದ್ದರೆ, 5 ಲಕ್ಷ ಮೆಟ್ರಿಕ್‌ ಟನ್ ಸರಕು ಸಾಗಾಟ ನಡೆದಿದೆ. ಈ ಮೂಲಕ ಪ್ರಯಾಣಿಕ ಹಾಗೂ ಕಾರ್ಗೊ ಕ್ಷೇತ್ರದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ತನ್ನದೇ ಆದ ದಾಖಲೆ ಸ್ಥಾಪಿಸಿದೆ.

ಬೆಂಗಳೂರು ವಿಮಾನ ನಿಲ್ದಾಣದ ಮೂಲಕ 2024-25ರಲ್ಲಿ 41.88 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇದು ಹಿಂದಿನ ಹಣಕಾಸು ವರ್ಷಕ್ಕೆ (2023-24ರಲ್ಲಿ 37.53 ದಶಲಕ್ಷ ಪ್ರಯಾಣಿಕರು) ಹೋಲಿಸಿದರೆ ಶೇಕಡ 11.6 ಹೆಚ್ಚು. ದೇಶೀಯ ವಾಯುಯಾನ ಪ್ರಯಾಣಿಕರ ಸಂಖ್ಯೆ ಕೂಡ ಶೇಕಡ 10 ಹೆಚ್ಚಳವಾಗಿದ್ದು, 36.05 ದಶಲಕ್ಷ ತಲುಪಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 5.83 ದಶಲಕ್ಷ ಆಗಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 25 ಬೆಳವಣಿಗೆ ದಾಖಲಿಸಿದೆ.

ಅಂತ...