Bengaluru, ಫೆಬ್ರವರಿ 25 -- ರವಿಕೆಯಿಂದ ಸೀರೆಯ ಲುಕ್ ಹೆಚ್ಚಾಗುತ್ತದೆ:ಸೀರೆ ಭಾರತೀಯ ಮಹಿಳೆಯರ ಅಚ್ಚುಮೆಚ್ಚಿನ ಸಾಂಪ್ರದಾಯಿಕ ಉಡುಪಾಗಿದೆ. ದೈನಂದಿನ ಉಡುಗೆಯಾಗಿರಲಿ ಅಥವಾ ಯಾವುದೇ ವಿಶೇಷ ಸಂದರ್ಭವಾಗಿರಲಿ,ಇವು ಎಲ್ಲಾ ಸಂದರ್ಭಗಳಲ್ಲೂ ಧರಿಸಲು ಸೂಕ್ತವಾಗಿವೆ. ಆದರೆ,ಸೀರೆಯ ಅಂದವನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸುವುದು ಬ್ಲೌಸ್ ಪೀಸ್. ಸೀರೆ ಕುಪ್ಪಸವನ್ನು ಸೊಗಸಾಗಿ ಹೊಲಿಯುವುದರಿಂದ ನಿಮ್ಮ ಒಟ್ಟಾರೆ ನೋಟ ಇನ್ನಷ್ಟು ಸೊಗಸಾಗುತ್ತದೆ. ಹೀಗಾಗಿಸರಿಯಾದ ವಿನ್ಯಾಸವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಬ್ಲೌಸ್‌ನ ಮುಂಭಾಗ ಮತ್ತು ಹಿಂಭಾಗದ ವಿಭಿನ್ನ, ಸುಂದರ ವಿನ್ಯಾಸಗಳು ಇಲ್ಲಿವೆ.

ಆಕರ್ಷಕ ಬ್ಲೌಸ್ ವಿನ್ಯಾಸ:ಇತ್ತೀಚಿನ ದಿನಗಳಲ್ಲಿ ಈ ರೀತಿಯ ಬ್ಲೌಸ್ ಪೀಸ್ ಹೆಚ್ಚು ಟ್ರೆಂಡ್ ಆಗಿವೆ. ನೀವು ಈ ರೀತಿಯ ಮುಂಭಾಗದ ವಿನ್ಯಾಸವನ್ನು ಸಹ ಪಡೆಯಬಹುದು.ಇದು ತುಂಬಾ ಆಕರ್ಷಕ ನೋಟವನ್ನು ನೀಡುತ್ತದೆ. ಈ ರೀತಿಯ ಬ್ಲೌಸ್ ಹೆಚ್ಚಾಗಿ ತಿಳಿ ಮೃದುವಾದ ಬಟ್ಟೆಯಿಂದ ಮಾಡಿದ ಸೀರೆಗಳಿಗೆ ಚೆನ್ನಾಗಿ ಕಾಣುತ್ತದೆ.

ನಿಮ್ಮ ಬೆನ್ನಿನ ಮೇಲ...