ಭಾರತ, ಮಾರ್ಚ್ 12 -- ಎಷ್ಟೇ ಸರಳ ಸೀರೆಯಾದ್ರೂ, ಎಷ್ಟೇ ದುಬಾರಿ ಸೀರೆಯಾದ್ರೂ ಈ ಸೀರೆಗೆ ಒಂದು ಮೆರುಗು ತರೋದು ಬ್ಲೌಸ್‌ ವಿನ್ಯಾಸ. ಬ್ಲೌಸ್ ಡಿಸೈನ್‌ಗಳು ಇತ್ತೀಚೆಗೆ ಟ್ರೆಂಡ್ ಸೃಷ್ಟಿಸುತ್ತಿವೆ. ನೀವು ಹೊಸ ಸೀರೆ ಖರೀದಿಸಿದಾಗ ಬ್ಲೌಸ್ ಡಿಸೈನ್ ಹೇಗೆ ಮಾಡಿಸೋದು ಅಂತ ಯೋಚಿಸ್ತೀರಾ, ಈ ಬಾರಿ ತೋಳಿನ ಡಿಸೈನ್ ಬಗ್ಗೆಯೂ ಕೊಂಚ ಯೋಚಿಸಿ. ಬೇಸಿಗೆಗೆ ಹೊಂದುವ, ಈಗಿನ ಟ್ರೆಂಡ್‌ಗೂ ಸೂಟ್ ಆಗುವ ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಬ್ಲೌಸ್ ಸ್ಲೀವ್ ಡಿಸೈನ್‌ಗಳು ಇಲ್ಲಿವೆ ನೋಡಿ. ಇದನ್ನು ನಿಮ್ಮ ಬ್ಲೌಸ್‌ಗೂ ನೀವು ಆಯ್ಕೆ ಮಾಡಿಕೊಳ್ಳಬಹುದು.

ಫ್ಲವರ್ ಸ್ಲೀವ್‌ಬೇಸಿಗೆಯಲ್ಲಿ ಹೆಚ್ಚಿನ ಮಹಿಳೆಯರು ಹಾಫ್‌ ಸ್ಲೀವ್‌ ಬ್ಲೌಸ್‌ಗಳನ್ನು ಧರಿಸಲು ಇಷ್ಟಪಡುತ್ತಾರೆ. ನೀವೂ ಕೂಡ ಶಾರ್ಟ್ ಸ್ಲೀವ್ ಡಿಸೈನ್ ಮಾಡಿಸಬೇಕು ಅಂತಿದ್ದರೆ ಹೂವಿನ ಚಿತ್ತಾರದ ಡಿಸೈನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ನಿಮಗೆ ಸೀರೆ ನೋಟಕ್ಕೆ ಮುದ್ದಾದ ಲುಕ್ ನೀಡುತ್ತದೆ.

ಡೈಮಂಡ್ ಶೇಪ್‌ ಕಟ್ ವರ್ಕ್ ಸ್ಲೀವ್‌ಗಳುಬ್ಲೌಸ್‌ನ ತೋಳುಗಳಿಗೆ ಹೆಚ್ಚು ಅಲಂಕಾರಿಕ ನೋಟವನ...