ಭಾರತ, ಮಾರ್ಚ್ 30 -- ಸೀರೆ ಖರೀದಿ ಮಾಡುವಾಗ ಇಲ್ಲದ ಚಿಂತೆ ಶುರುವಾಗೋದು ಬ್ಲೌಸ್ ವಿಚಾರಕ್ಕೆ ಬಂದಾಗ. ಇತ್ತೀಚಿನ ದಿನಗಳಲ್ಲಿ ಸೀರೆಗಿಂತ ಬ್ಲೌಸ್‌ ಡಿಸೈನ್‌ಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಅದರಲ್ಲೂ ಈಗ ಕಾಂಟ್ರ್ಯಾಸ್ಟ್ ಬ್ಲೌಸ್ ಡಿಸೈನ್‌ ಟ್ರೆಂಡ್‌. ಹಾಗಂತ ಯಾವ್ಯಾವುದೋ ಸೀರೆಗೆ, ಯಾವ್ಯಾವುದೋ ರವಿಕೆ ಧರಿಸಲು ಆಗುವುದಿಲ್ಲ. ಕೆಲವೊಂದು ಬಣ್ಣಕ್ಕೆ ಅದಕ್ಕೆ ಕಾಂಟ್ರ್ಯಾಸ್ಟ್ ಆಗಿ ಕೆಲವು ಬಣ್ಣ ಮಾತ್ರ ಮ್ಯಾಚ್ ಆಗುತ್ತೆ.

ಹೆಣ್ಣುಮಕ್ಕಳು ಗುಲಾಬಿ ಬಣ್ಣದ ಪ್ರಿಯರು. ಪಿಂಕ್ ಕಲರ್‌ಗೂ ಹೆಣ್ಣುಮಕ್ಕಳಿಗೂ ವಿಶೇಷ ಅನುಬಂಧ. ಸಾಮಾನ್ಯವಾಗಿ ಎಲ್ಲ ಹೆಣ್ಣುಮಕ್ಕಳ ಬಳಿಯೂ ಗುಲಾಬಿ ಬಣ್ಣದ ಸೀರೆ ಇರುತ್ತದೆ. ನಿಮ್ಮ ಬಳಿ ಕಡು ಗುಲಾಬಿ ಅಥವಾ ಡಾರ್ಕ್ ಪಿಂಕ್ ಸಾರಿ ಇದ್ದು ನೀವು ಆ ಸೀರೆಗೆ ಕಾಂಟ್ರ್ಯಾಸ್ಟ್‌ ಬ್ಲೌಸ್ ಹೊಲಿಸಬೇಕು ಅಥವಾ ಖರೀದಿ ಮಾಡಬೇಕು ಅಂತಿದ್ರೆ ಯಾವ ಬಣ್ಣ ಹೊಂದುತ್ತೆ ಅಂತ ಗೊಂದಲ ಮಾಡಿಕೊಂಡಿರಬಹುದು. ಚಿಂತೆ ಬೇಡ ನಿಮ್ಮ ಗೊಂದಲ ಪರಿಹರಿಸಿ, ನಿಮ್ಮ ಸೀರೆಗೆ ಹೊಂದುವ ಕಾಂಟ್ರ್ಯಾಸ್ಟ್ ಬ್ಲೌಸ್‌ ಬಗ್ಗೆ ನಾವಿಲ್ಲಿ ನಿಮ...