ಭಾರತ, ಏಪ್ರಿಲ್ 10 -- ಕನ್ನಡದ ಹಲವು ನಟಿ ನಟರು ಪರಭಾಷೆ ಚಿತ್ರಗಳಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಸ್ಯಾಂಡಲ್‌ವುಡ್‌ನ ಪ್ರತಿಭೆಗಳಾದ ಚರಣ್‌ರಾಜ್, ಪ್ರಕಾಶ್‌ ರೈ, ಅರ್ಜುನ್‌ ಸರ್ಜಾ, ರಶ್ಮಿಕಾ ಮಂದಣ್ಣಾ, ಶ್ರೀಲೀಲಾ, ಪೂಜಾಹೆಗ್ದೆ ಮುಂತಾದವರು ನೆರೆಯ ಭಾಷೆಯಲ್ಲಿ ಖ್ಯಾತರಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಈ ಸಾಲಿಗೆ ಚಿತ್ರರಂಗದ ಚಾಕಲೇಟ್ ಬಾಯ್ ಅಂತ ಪ್ರೀತಿಯಿಂದ ಕರೆಸಿಕೊಂಡಿರುವ ಧರ್ಮ ಕೀರ್ತಿರಾಜ್ ಬ್ಲಡ್ ರೋಸಸ್ ಸಿನಿಮಾದ ಮುಖಾಂತರ ಟಾಲಿವುಡ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ನಿರ್ದೇಶಕರು ಇವರಿಗೆ ರಂಜಿತ್‌ ರಾಮ್ ಎಂದು ನಾಮಕರಣ ಮಾಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಹಬ್ಬದ ದಿನದಂದು ಪೋಸ್ಟರ್ ಬಿಡಲಾಗಿ ಎಲ್ಲಡೆ ವೈರಲ್ ಆಗಿರುವುದು ತಂಡಕ್ಕೆ ಸಂತಸ ತಂದಿದೆ.

ಎಂ.ಗುರುರಾಜನ್ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಟಿಬಿಆರ್.ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಹರೀಶ್.ಕೆ ಬಂಡವಾಳ ಹೂಡಿದ್ದು, ಯಲ್ಲಪ್ಪ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕೆ.ಲಕ್ಷಮ್ಮ ಮತ್ತು ಕ...