ಭಾರತ, ಫೆಬ್ರವರಿ 21 -- Blood Moon 2025: ಜಗತ್ತು ವರ್ಷದ ಮೊದಲ ವಿಸ್ಮಯಕ್ಕೆ ಸಾಕ್ಷಿಯಾಗುತ್ತಿದೆ. ಮಾರ್ಚ್ 13ರ ಗುರುವಾರ ರಾತ್ರಿ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಇದನ್ನು ಕೆಂಪು ರಕ್ತ ಚಂದ್ರ ಗ್ರಹಣ ಅಂತಲೂ ಕರೆಯಲಾಗುತ್ತದೆ. ಏಕೆಂದರೆ ಚಂದ್ರ ಗ್ರಹಣದ ಸಮಯದಲ್ಲಿ ಚಂದ್ರ ಗಾಢ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಬದಲಾವಣೆ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್ ಹಾಗೂ ಆಫ್ರಿಕಾ ದೇಶಗಳ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸುತ್ತದೆ. ಬ್ಲಡ್ ಮೂನ್ ಎಂದರೇನು ಎಂಬುದು ಸೇರಿದಂತೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಯುಎಸ್ ನಲ್ಲಿರುವವರಿಗೆ ಮಾರ್ಚ್ 13ರ ರಾತ್ರಿ ಸುಮಾರು 11.57ಕ್ಕೆ ಸಂಪೂರ್ಣ ಚಂದ್ರ ಗ್ರಹಣ ಗೋಚರ ಪ್ರಾರಂಭವಾಗುತ್ತದೆ. ಭಾಗಶಃ ಗ್ರಹವು ಮಾರ್ಚ್ 14ರ ಶುಕ್ರವಾರ ಬೆಳಗ್ಗೆ 1.09ಕ್ಕೆ ಗೋಚರಿಸುತ್ತದೆ. ಒಟ್ಟಾರೆಯಾಗಿ ಗ್ರಹಣವು ಇಎಸ್ ಟಿ ಸಮಯದ ಪ್ರಕಾರ, ಬೆಳಗಿನ ಜಾವ 2.26ಕ್ಕೆ ಗರಿಷ್ಠ ಮಟ್ಟಕ್ಕೆ ತಲುಪಿ ಬೆಳಗ್ಗೆ 3.31ಕ್ಕೆ ಕೊನ...