Chikkaballapur, ಫೆಬ್ರವರಿ 27 -- Bird flu Suspect: ಚಿಕ್ಕಬಳ್ಳಾಪುರ ಜಿಲ್ಲೆಯ ಆಂಧ್ರಕ್ಕೆ ಹೊಂದಿಕೊಂಡಂತೆ ಇರುವ ವರದಿಹಳ್ಳಿ ಎಂಬ ಹಳ್ಳಿಯಲ್ಲಿ ಕೋಳಿಗಳು ಮೃತಪಟ್ಟಿದ್ದು, ಕರ್ನಾಟಕಕ್ಕೂ ಹಕ್ಕಿಜ್ವರ ಹರಡಬಹುದಾ ಎನ್ನುವ ಆತಂಕ ಎದುರಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಪುಟ್ಟ ಗ್ರಾಮ ವರದಹಳ್ಳಿಯಲ್ಲಿ ಮೂರು ನಾಲ್ಕು ದಿನದ ಹಿಂದೆ ಸುಮಾರು 50 ಹಕ್ಕಿಗಳು ಮೃತಪಟ್ಟಿವೆ. ಹಕ್ಕಿಗಳು ಯಾವ ಕಾರಣಕ್ಕೆ ಮೃತಪಟ್ಟಿವೆ ನಿಖರ ಕಾರಣ ತಿಳಿಯಲು ಚಿಕ್ಕಬಳ್ಳಾಪುರ ಪಶು ಪಾಲನಾ ಇಲಾಖೆಯಿಂದ ಮೃತ ಕೋಳಿಗಳ ದೇಹದ ಭಾಗಗಳಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಕೇಂದ್ರೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿಗಾಗಿ ಕಾಯಲಾಗುತ್ತಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವರದಹಳ್ಳಿಯಲ್ಲಿ ಕೋಳಿಗಳು ಸತ್ತಿರುವ ಭಾಗವನ್ನು ಸೀಲ್‌ ಮಾಡಲಾಗಿದೆ. ಔಷಧಗಳನ್ನು ಸಿಂಪಡಿಸಿ ಜನರಿಗೆ ಜಾಗೃತಿಯನ್ನೂ ಮೂಡಿಸಲಾಗಿದೆ.

ಮೂರು ದಿನದ ಹಿಂದೆ ವರದಹಳ್ಳಿಯಲ್ಲಿ ಕೋಳಿಗಳು ಮೃತಪಟ್ಟಿರುವ ಮಾಹಿತಿ ದೊರೆತಿತ್ತು. ಸೋಮವಾರವೇ ಹಳ್ಳಿಗೆ ತೆರಳಿದ ಪಶು...