ಭಾರತ, ಫೆಬ್ರವರಿ 28 -- ಭಾರತದಾದ್ಯಂತ ಮತ್ತೆ ಹಕ್ಕಿಜ್ವರದ ಭೀತಿ ಎದುರಾಗಿದೆ. ಕಳೆದ ತಿಂಗಳು ನೆರೆಯ ಆಂಧ್ರಪ್ರದೇಶದಲ್ಲಿ ವ್ಯಾಪಕವಾಗಿ ಹರಡಿದ್ದ ಹಕ್ಕಿಜ್ವರ, ಇದೀಗ ಕರ್ನಾಟಕದ ಗಡಿಭಾಗದಲ್ಲೂ ಕಾಣಿಸಿದೆ. ಚಿಕ್ಕಬಳ್ಳಾಪುರದ ವರದಹಳ್ಳಿಯಲ್ಲಿ ಕೋಳಿಗಳು ಏಕಾಏಕಿ ಸಾವನ್ನಪ್ಪಿದ್ದು, ಹಕ್ಕಿಜ್ವರದ ಆತಂಕ ಎದುರಾಗಿದೆ. ಹಕ್ಕಿಜ್ವರ ಪತ್ತೆಯಾದ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಸಾವಿರಾರು ಕೋಳಿಗಳನ್ನು ಸಾಮೂಹಿಕ ಹತ್ಯೆ ಮಾಡಲಾಗಿದೆ.

ಹಕ್ಕಿ ಜ್ವರ ಎಲ್ಲೆಡೆ ಹರಡುತ್ತಿರುವ ಕಾರಣ ಜನರು ಇದೀಗ ಕೋಳಿ ಮಾಂಸ ಹಾಗೂ ಮೊಟ್ಟೆ ತಿನ್ನುವ ವಿಚಾರದಲ್ಲಿ ಆತಂಕ ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ತಿನ್ನುವುದು ಸುರಕ್ಷಿತವೇ ಎನ್ನುವ ಭಾವನೆ ಹಲವರಲ್ಲಿದೆ. ಹಕ್ಕಿ ಜ್ವರ ಇರುವಾಗ ಕೋಳಿ ಮಾಂಸ, ಮೊಟ್ಟೆ ಸುರಕ್ಷಿತವೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹಕ್ಕಿಜ್ವರ ಎನ್ನುವುದು H5N1 ವೈರಸ್‌ನಿಂದ ಹರಡುವ ಸೋಂಕಾಗಿದೆ. ಇದು ಪಕ್ಷಿಗಳಲ್ಲಿ ಕಾಣಿಸುತ್ತದೆ. ಇದು ವ್ಯಾಪಕವಾಗಿ ಹರಡುವ ಕಾರಣ ಆತಂಕ ಸೃಷ್ಟಿಸುತ್ತದೆ. ಹಕ್ಕ...