Bengaluru, ಜನವರಿ 27 -- Bigg Boss Winner Hanumantha Lamani: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದೆನಿಸಿಕೊಂಡಿರುವ ಬಿಗ್‌ ಬಾಸ್‌ ಕನ್ನಡದ 11ನೇ ಆವೃತ್ತಿಯ ವಿಜೇತರಾಗಿ ಹನುಮಂತ ಲಮಾಣಿ ಹೊರಹೊಮ್ಮಿದ್ದಾರೆ. ವಿವಿಧ ಕ್ಷೇತ್ರಗಳ 20 ಸ್ಪರ್ಧಿಗಳನ್ನು ಒಳಗೊಂಡಿದ್ದ ‌ಈ ಸಲದ ಬಿಗ್ ಬಾಸ್‌ನಲ್ಲಿ, ಘಟಾನುಘಟಿಗಳೇ ದಂಡೇ ಇತ್ತು. ಬಲಿಷ್ಠ ಸ್ಪರ್ಧಿಗಳ ನಡುವೆ, ಚಾಣಾಕ್ಷ ಆಟಗಾರರೂ ಬಿಗ್‌ ಬಾಸ್‌ ಮನೆ ಪ್ರವೇಶಕ್ಕೂ ಮೊದಲೇ, ಒಂದಷ್ಟು ಪಟ್ಟುಗಳನ್ನು ಕಲಿತು ಬಂದಿದ್ದರು. ಆದರೆ, ಅದ್ಯಾವುದರ ಅರಿವೇ ಇಲ್ಲದೆ, ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಸೈಲೆಂಟ್‌ ಆಗಿ ಬಂದು, ಈಗ ಕಪ್‌ ಗೆದ್ದು ಎಲ್ಲರ ಹುಬ್ಬೇರಿಸಿದ್ದಾರೆ ಹಾವೇರಿಯ ಹಮ್ಮೀರ ಹನುಮಂತ ಲಮಾಣಿ!

ಅಪ್ಪಟ ಹಳ್ಳಿಗಾಡಿನ ಹುಡುಗ ಈ ಹನುಮಂತು. ವಿದ್ಯೆ ಅಷ್ಟಕಷ್ಟೇ. ವಿದ್ಯೆ ಕಡಿಮೆ ಇದ್ದರೂ ಕುರಿಕಾಯುತ್ತ, ಅದೇ ಕುರಿಗಳ ನಡುವೆ ಬಂಜಾರ ಸಮುದಾಯದ ಹಾಡು, ಭಜನೆ ಪದಗಳನ್ನು ಹಾಡುತ್ತ, ಸಂಗೀತದಲ್ಲಿ ಮುಂದುವರಿದು ಗುರುತಿಸಿಕೊಂಡ. ಕರ್ನಾಟಕದ ಜನತೆಗೆ ಹನುಮಂತ ಲಮಾಣಿಯ ಪರಿಚಯ...