ಭಾರತ, ಜನವರಿ 27 -- Bigg Boss Winner Hanumantha: ಬಿಗ್‌ ಬಾಸ್‌ ಟ್ರೋಫಿ ತನ್ನದಾಗಿಸಿಕೊಂಡ ಹನುಮಂತ ಬಿಗ್‌ ಬಾಸ್‌ ವೇದಿಕೆಯಿಂದ ಬಂದ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಗೆಲುವಿನ ಬಗ್ಗೆ ಹಾಗೂ ತಾನು ಗೆಲ್ಲಲು ಕಾರಣೀಕರ್ತರಾದ ಅಭಿಮಾನಿಗಳ ಬಗ್ಗೆ ಬರೆದುಕೊಂಡಿದ್ದಾರೆ. ಧನ್ಯವಾದಗಳನ್ನು ತಿಳಿಸಿದ್ದಾರೆ. ನಿಮ್ಮ ಪ್ರೀತಿ, ಹಾಗೂ ಬೆಂಬಲದಿಂದ ಮಾತ್ರ ಇದೆಲ್ಲವೂ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಅವರು ಬರೆದುಕೊಂಡ ಪೋಸ್ಟ್‌ ಇಲ್ಲಿದೆ ಗಮನಿಸಿ.

ಎಲ್ಲ ನನ್ನಾ ಕನ್ನಡ ಜನತೆಗೆ ನಮಸ್ಕಾರ ಇದೊಂದು ಮಹತ್ವದ ಕ್ಷಣ. ಮೊದಲು ಈ ವಿಶೇಷ ಟ್ರೋಫಿಯನ್ನು ನನ್ನದಾಗಿಸಿದ ಎಲ್ಲಾ ನನ್ನ ಪ್ರೀತಿಯ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಅಣಿಮುಖ ಬೆಂಬಲ ಮತ್ತು ಪ್ರೀತಿಯಿಲ್ಲದೆ ನಾನು ಟ್ರೊಫಿಯನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ "ಈ ಗೆಲುವು ನಿಮ್ಮ ಪ್ರೀತಿ, ಬೆಂಬಲ ಮತ್ತು ವಿಶ್ವಾಸದ ಫಲ. ಈ ಟ್ರೋಫಿ ನನ್ನದಲ್ಲ ನಿಮ್ಮೆಲ್ಲರದ್ದು. ನನಗೆ ಸದಾ ಪ್ರೇರಣೆ ನೀಡಿದ ಪ್ರತಿ ಹೃದಯಕ್ಕೂ ಹೃತ್ಪೂರ್ವಕ ಧನ್ಯವ...