Bengaluru, ಜನವರಿ 26 -- Bigg Boss Kannada 11 Grand Finale: ಈ ವರೆಗಿನ 10 ಸೀಸನ್‌ಗಳ ತೂಕ ಒಂದೆಡೆಯಾದರೆ, 11ನೇ ಸೀಸನ್‌ನ ತೂಕ ಅದೆಲ್ಲದಕ್ಕಿಂತ ಹೆಚ್ಚು. ಸೀಸನ್‌ನಿಂದ ಸೀಸನ್‌ಗೆ ಹೆಚ್ಚೆಚ್ಚು ವೀಕ್ಷಕರನ್ನು ಸೆಳೆದುಕೊಳ್ಳುತ್ತಿರುವ ಈ ರಿಯಾಲಿಟಿ ಶೋ, 11ನೇ ಆವೃತ್ತಿಯಲ್ಲಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಮೊದಲೆಲ್ಲ ಲಕ್ಷ ಲಕ್ಷ ವೋಟ್‌ಗಳು ಸಂದಾಯವಾಗುತ್ತಿದ್ದರೆ, ಈಗ ಅದು ಕೋಟಿಯ ಗಡಿ ದಾಟಿದೆ. ಇಂತಿಪ್ಪ 11ನೇ ಸೀಸನ್‌ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಉಳಿದ ಐವರು ಸ್ಪರ್ಧಿಗಳಲ್ಲಿ ಒಬ್ಬ ವಿಜೇತನ ಘೋಷಣೆ ಆಗಿದೆ. ವಿನ್ನರ್‌ ಯಾರು? ಇಲ್ಲಿದೆ ಮಾಹಿತಿ.

ಬಿಗ್‌ ಬಾಸ್‌ ಶುರುವಾಗಿ 17 ವಾರಗಳು ಇಂದಿಗೆ ಮುಗಿಯಲಿದೆ. ಅಂದಿನಿಂದ 20 ಸ್ಪರ್ಧಿಗಳು ಈ ಶೋನಲ್ಲಿ ತಮ್ಮ ಆಟ ಆಡಿದ್ದಾರೆ. ಆ ಪೈಕಿ 15 ಮಂದಿ ಎಲಿಮಿನೇಟ್‌ ಆಗಿ ಹೊರನಡೆದಿದ್ದಾರೆ. ಇಂದಿಗ ಅಂತಿಮವಾಗಿ ಕೇವಲ ಐವರು ಸ್ಪರ್ಧಿಗಳು ಮಾತ್ರ ಬಿಗ್‌ ಬಾಸ್‌ ಫಿನಾಲೆಯಲ್ಲಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಭವ್ಯಾ ಗೌಡ ಐದನೇ ರನ್ನರ್‌ ಅಪ್‌ ಆಗಿ ...