Bengaluru, ಜನವರಿ 26 -- Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಗ್ರ್ಯಾಂಡ್‌ ಫಿನಾಲೆ ಫಲಿತಾಂಶ ಹೊರಬಿದ್ದಿದೆ. ಅಂತಿಮವಾಗಿ ಉಳಿದ ತ್ರಿವಿಕ್ರಮ್‌ ಮತ್ತು ಹನುಮಂತ ಇವರಿಬ್ಬರ ಪೈಕಿ ಹಳ್ಳಿ ಹಕ್ಕಿ ಹನುಮಂತು ಅವರ ಕೈ ಎತ್ತುವ ಮೂಲಕ ಕಿಚ್ಚ ಸುದೀಪ್‌ ವಿಜೇತರನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ಹನುಮಂತ ಲಮಾಣಿಗೆ ಬಿಗ್‌ ಬಾಸ್‌ ಪಟ್ಟ ಒಲಿದಿದೆ. ಈ ಶೋ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಸಿಕ್ಕ ಮೊದಲ ಬಿಗ್‌ ಬಾಸ್‌ ಟ್ರೋಫಿ ಇದಾಗಿದೆ.

ಬಿಗ್‌ ಬಾಸ್‌ ಶುರುವಾದ ಮೂರೇ ವಾರಕ್ಕೆ ಜಗದೀಶ್‌ ಮತ್ತು ರಂಜಿತ್‌ ನೇರವಾಗಿ ಎಲಿಮಿನೇಟ್‌ ಆದರು. ಆಗ ವೈಲ್ಡ್‌ ಕಾರ್ಡ್ ಎಂಟ್ರಿಕೊಟ್ಟವರು ಹನುಮಂತ ಲಮಾಣಿ. ಘಟಾನುಘಟಿಗಳ ನಡುವೆ ತಮ್ಮ ಹಾಡುಗಳ ಮೂಲಕವೇ ರಂಜಿಸಿದ ಹನಮಂತ ಲಮಾಣಿ, ಯಾರ ಜತೆಗೆ ದ್ವೇಷ ಕಟ್ಟಿಕೊಳ್ಳದೆ, ಸ್ನೇಹ ಬಯಸಿದ ಜೀವಗಳಿಗೆ ಅಂಗಲಾಚಿ ಸ್ನೇಹ ನೀಡಿದ್ದಾರೆ. ಅದರ ಪ್ರತಿಫಲವೇ ಮೊದಲ ಫಿನಾಲೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟು, ಈಗ ಎರಡು ರೆಕ್ಕೆಗಳುಳ್ಳ ಟ್ರೋಫಿ ಗೆದ್ದು ಬೀಗಿದ್ದಾರೆ.

ಬಿಗ್‌ ಬಾಸ್‌ ಮನೆ ಒಳಗೆ ಪ್ರ...