Bengaluru, ಜನವರಿ 26 -- Bigg Boss Kannada 11 Grand Finale: ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಎಂಟ್ರಿ ಕೊಟ್ಟಿದ್ದ ಇಬ್ಬರು ಲೇಡಿ ಕಂಟೆಸ್ಟಂಟ್‌ಗಳ ಪೈಕಿ, ಉಳಿದಿದ್ದು ಮೋಕ್ಷಿತಾ ಪೈ ಮಾತ್ರ. ಈಗ ಮೋಕ್ಷಿತಾ ಸಹ ಅಚ್ಚರಿಯ ರೀತಿಯಲ್ಲಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ 17 ವಾರಗಳ ಆಟಕ್ಕೆ ಬ್ರೇಕ್ ಹಾಕಿ ಇದೀಗ ಕಿಚ್ಚನ ಕರೆಗೆ ಓಗೊಟ್ಟು, ಮೂರನೇ ರನ್ನರ್ ಅಪ್ ಆಗಿ ವೇದಿಕೆ ಸೇರಿದ್ದಾರೆ.
ಅಂದಹಾಗೆ, ಒಟ್ಟು ಆರು ಮಂದಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ತಲುಪಿದ್ದರು. ಹನುಮಂತ ಲಮಾಣಿ ಫಿನಾಲೆ ತಲುಪಿದ್ದ ಮೊದಲ ಸ್ಪರ್ಧಿಯಾಗಿದ್ದರು. ಅದಾದ ಬಳಿಕ ಮೋಕ್ಷಿತಾ, ತ್ರಿವಿಕ್ರಮ್, ರಜತ್, ಭವ್ಯಾ ಗೌಡ ಮತ್ತು ಉಗ್ರಂ ಮಂಜು ಟಾಪ್ ಆರರಲ್ಲಿ ಸ್ಥಾನ ಪಡೆದಿದ್ದರು. ಈ ಆರು ಜನರಲ್ಲಿ ಶನಿವಾರವೇ ಭವ್ಯಾ ಗೌಡ 5ನೇ ರನ್ನರ್ ಅಪ್ ಆಗಿ ಎಲಿಮಿನೇಟ್ ಆದರೆ, ಭಾನುವಾರ ಉಗ್ರಂ ಮಂಜು ನಾಲ್ಕನೇ ರನ್ನರ್ ಅಪ್ ಆಗಿ ಹೊರನಡೆದರು.
ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ...
Click here to read full article from source
To read the full article or to get the complete feed from this publication, please
Contact Us.