ಭಾರತ, ಜನವರಿ 26 -- Bigg Boss Kannada 11 Grand finale: ಬಿಗ್ ಬಾಸ್‌ನಿಂದ ಉಗ್ರಂ ಮಂಜು ಹೊರಬಂದಿದ್ದಾರೆ. ಬಿಗ್ ಬಾಸ್ ಫಿನಾಲೆಯಿಂದ ಉಗ್ರಂ ಮಂಜು ಔಟ್ ಆಗಿದ್ದಾರೆ. ಬಿಗ್ ಬಾಸ್‌ ಮನೆಯೊಳಗಡೆ ಒಂದಷ್ಟು ಜನ ಡಾನ್ಸರ್‍ಸ್‌ ಬರುತ್ತಾರೆ. ಅವರು ಡಾನ್ಸ್‌ ಮಾಡುತ್ತಲೇ ಎಲ್ಲ ಸ್ಪರ್ಧಿಗಳನ್ನೂ ಒಂದೊಂದು ಕಡೆ ಕೊಂಡೊಯ್ಯುತ್ತಾರೆ. ಎಲ್ಲರೂ ಡಾನ್ಸ್‌ ಮಾಡುತ್ತಾ ಇರುವ ಸಂದರ್ಭದಲ್ಲಿ ಹಾಡು ನಿಲ್ಲುತ್ತದೆ. ಆದರೆ ಬಿಗ್‌ ಬಾಸ್‌ ಮನೆಯೊಳಗಡೆ ಮತ್ತೆ ಉಗ್ರಂ ಮಂಜು ಬರುವುದಿಲ್ಲ. ಮೋಕ್ಷಿತಾ ಶಾಕ್ ಆಗಿದ್ದಾರೆ. ಬಿಗ್ ಬಾಸ್‌ ಮನೆಯಿಂದ ಔಟ್ ಆದ ಸ್ಪರ್ಧಿ ಉಗ್ರಂ ಮಂಜು ಎಂದು ಮೊದಲು ಮೋಕ್ಷಿತಾ ಗ್ರಹಿಸಿದ್ದಾರೆ.

ಮಂಜು ಬಿಗ್‌ ಬಾಸ್‌ ಮನೆಯೊಳಗಡೆ ಮೊದಲ ದಿನದಿಂದಲೂ ಇದ್ದ ಸ್ಪರ್ಧಿ. ತಾಯಿಗಾಗಿ ನಾನು ಒಂದು ಕಪ್ ಗೆದ್ದು ಹೋಗಬೇಕು ಎನ್ನುತ್ತಲೇ ಅವರು ಮನೆಯೊಳಗಡೆ ಬಂದಿದ್ದರು. ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ನನಗೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಆ ಕಾರಣಕ್ಕಾಗಿ ನನಗೆ ಈ ಟ್ರೋಪಿ ಮುಖ್ಯ ಎಂದು ಹೇಳಿದ್ದರು. ಆದರೆ ಕೊನೆಗೂ ಟ್ರೋ...