ಭಾರತ, ಮಾರ್ಚ್ 4 -- 16th Bangalore International Film Festival: ಬೆಂಗಳೂರಿನಲ್ಲಿ 16ನೇ ಅಂತರಾಷ್ಟ್ರೀಯ ಚಿತ್ರೋತ್ಸವ ಆರಂಭವಾಗಿದೆ. ಸಾಕಷ್ಟು ಸಿನಿಮಾಗಳು ಈಗಾಗಲೇ ಪ್ರದರ್ಶನ ಕಂಡಿವೆ. ಮಾರ್ಚ್ 1ರಿಂದ 8ರವರೆಗೆ ಚಿತ್ರೋತ್ಸವ ನಡೆಯುತ್ತದೆ. ಈಗಾಗಲೇ ಮೂರು ದಿನಗಳು ಕಳೆದಿರುವ ಕಾರಣ ಸಾಕಷ್ಟು ಸಿನಿಮಾಗಳ ಪ್ರದರ್ಶನವೂ ನಡೆದಿವೆ. ಇನ್ನೂ ಕೆಲವು ದಿನಗಳ ಕಾಲ ಸಿನಿಪ್ರಿಯರು ನೋಡಲೇಬೇಕಾದ ಹಲವು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಹೀಗಿರುವಾಗ ನಾಳೆ ಮಾರ್ಚ್ 5ರಂದು ಯಾವ ಯಾವ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ ಎಂಬ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ನಿಮಗೂ ನಾಳೆ ಚಿತ್ರೋತ್ಸವಕ್ಕೆ ಹೋಗುವ ಮನಸ್ಸಿದ್ದರೆ ಈ ಸಿನಿಮಾಗಳು ನಿಮ್ಮ ಪಾಲಿಗಿವೆ ಗಮನಿಸಿ.

ಕನ್ನಡ ಮಾತ್ರವಲ್ಲ ಇನ್ನೂ ಹಲವು ಭಾಷೆಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಕನ್ನಡದ ಸಿನಿಮಾಗಳ ಪೈಕಿ ಉಪಾಧ್ಯಕ್ಷ, ಮಾರ್ಟಿನ್, ಪಿದಾಯಿ, ಮರ್ಯಾದೆ ಪ್ರಶ್ನೆ, ಬೆಳ್ಳಿ ಹೂ ಮತ್ತು ಅಂತಿಮ ಯಾತ್ರೆ, ಈ ಸಿನಿಮಾಗಳು ಪ್ರದರ್ಶನಕ್ಕೆ ಲಭ್ಯವಿವೆ.

ಬುಧವಾರ ನೀವು ಹ...