ಭಾರತ, ಜನವರಿ 30 -- ಭೂಮಿ ಶೆಟ್ಟಿ ಹವ್ಯಾಸಿ ಯಕ್ಷಗಾನ ಕಲಾವಿದೆಯೂ ಹೌದು. ಬಿಗ್ ಬಾಸ್‌ ಹಾಗೂ ಕಿನ್ನರಿ ಧಾರಾವಾಹಿ ಮೂಲಕ ಕರ್ನಾಟಕ ಜನತೆಗೆ ಪರಿಚಿತರಾದ ಭೂಮಿ ಶೆಟ್ಟಿ, ಯಕ್ಷಗಾನದಲ್ಲಿಯೂ ಪಾತ್ರ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಾವು ಮಾಡಿದ ಪಾತ್ರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಲವ-ಕುಶ ಪ್ರಸಂಗದಲ್ಲಿ ಸೀತೆಯ ಪಾತ್ರವನ್ನು ಭೂಮಿ ಶೆಟ್ಟಿ ಮಾಡಿದ್ದಾರೆ. ಯಾವ ರೀತಿ ಯಕ್ಷಗಾನದ ತಯಾರಿ ಮಾಡಿಕೊಂಡರು? ಹೇಗೆ ತಮ್ಮ ಪಾತ್ರದ ಬಗ್ಗೆ ಅರಿತುಕೊಂಡರು? ಎಂಬೆಲ್ಲ ವಿಷಯವನ್ನು ಹಂಚಿಕೊಂಡಿದ್ದಾರೆ. ರೀಲ್ಸ್‌ ಮಾಡುವ ಮೂಲಕ ಅವರ ತಯಾರಿಯ ಕಿರು ಚಿತ್ರಣವನ್ನು ಜನರ ಮುಂದಿಟ್ಟಿದ್ದಾರೆ.

ಭೂಮಿ ಶೆಟ್ಟಿ ಎಂದು ಅವರ ಮುಖ ನೋಡಿದ ಮಾತ್ರಕ್ಕೆ ಗುರುತೇ ಸಿಗುವುದಿಲ್ಲ, ಆ ರೀತಿಯಲ್ಲಿ ಅವರು ತಯಾರಾಗಿದ್ದಾರೆ. ಬಿಳಿ ಬಣ್ಣದ ಸೀರೆಯಲ್ಲಿ ಯಕ್ಷಗಾನ ವೇಷ ಭೂಷಣಗಳನ್ನು ತೊಟ್ಟು, ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡಿದ್ದಾರೆ. ಸಾಕಷ್ಟು ಜನ ಅವರ ಈ ಪ್ರತಿಭೆಯನ್ನು ಗುರುತಿಸಿ ಪ್ರಶಂಸಿಸಿದ್ದಾರೆ. ಭೂಮಿ ಈ ಹಿಂದೆ ಕೂಡ ಯಕ್ಷಗಾನದಲ್ಲಿ...