Bengaluru, ಮೇ 15 -- Bhagyalakshmi Serial: ದೇವಸ್ಥಾನದಲ್ಲಿ ಭಾಗ್ಯಾ ಬ್ಯಾಗ್‌ ಸೇರಿದ ಮದುವೆ ಆಹ್ವಾನ ಪತ್ರಿಕೆಯನ್ನು ಹೇಗಾದರೂ ಮಾಡಿ ವಾಪಸ್‌ ಪಡೆಯಬೇಕೆಂದು ತಾಂಡವ್‌ ಸರ್ಕಸ್‌ ಮಾಡುತ್ತಿದ್ದಾನೆ. ಆದರೆ ಏನು ಮಾಡಿದರೂ ಅದನ್ನು ಪಡೆದುಕೊಳ್ಳಲಾಗುತ್ತಿಲ್ಲ. ಸುನಂದಾಳನ್ನು ಕಳಿಸಿದರೂ ಅವಳೂ ಬ್ಯಾಗ್‌ ಇಲ್ಲದೆ ವಾಸಪ್‌ ಬಂದಿದ್ದಾಳೆ. ಕೊನೆಗೆ ತಾಂಡವ್‌ ತಾನೇ ಬ್ಯಾಗ್‌ ತರಲು ಹೋಗುತ್ತಾನೆ.

ಅಮ್ಮ ಮಲಗಿದ್ದಾಳೆ ಅನ್ನೋದನ್ನು ಖಚಿತಪಡಿಸಿಕೊಂಡ ತಾಂಡವ್‌ ಮೆಲ್ಲಗೆ ಭಾಗ್ಯಾ ರೂಮ್‌ನತ್ತ ಹೆಜ್ಜೆ ಹಾಕುತ್ತಾನೆ. ಅಲ್ಲಿ ಎಲ್ಲರೂ ಮಲಗಿರುತ್ತಾರೆ ಎಂದುಕೊಳ್ಳುವ ತಾಂಡವ್‌ ನಿಧಾನವಾಗಿ ವಾರ್ಡ್‌ರೂಬ್‌ನತ್ತ ಹೋಗುತ್ತಾನೆ. ಆದರೆ ತನ್ಮಯ್‌, ನಿದ್ರೆ ಮಾಡದೆ ವಿಡಿಯೋ ಗೇಮ್‌ ಆಡುತ್ತಿರುತ್ತಾನೆ. ಬೆಡ್‌ಶೀಟ್‌ ಅಂಚಿನಿಂದ ತಾಂಡವ್‌ ಕಾಲುಗಳನ್ನು ನೋಡುವ ಗುಂಡಣ್ಣ ಕಳ್ಳ ಕಳ್ಳ ಎಂದು ಅರಚುತ್ತಾನೆ. ಮಗ ಹೀಗೆ ಅರಚುವುದಕ್ಕೆ ಗಾಬರಿ ಆಗುವ ತಾಂಡವ್‌ ಹೊರಗೆ ಬರಲು ಆಗದೆ, ಬಚ್ಚಿಟ್ಟುಕೊಳ್ಳಲು ವಾರ್ಡ್‌ರೂಬ್‌ ಹತ್ತುತ್ತಾನೆ. ಗುಂಡಣ್ಣ ಎಲ್ಲೋ...