Bengaluru, ಮಾರ್ಚ್ 23 -- Bhagyalakshmi Serial: ಮನೆ ಬಿಟ್ಟು ಹೋಗಿದ್ದ ತಾಂಡವ್‌ ಅಂತೂ ಮನೆಗೆ ವಾಪಸ್‌ ಬಂದಿದ್ದಾನೆ. ಮನೆ ನಿಭಾಯಿಸಿದರೆ ಡಿವೋರ್ಸ್‌ ಪತ್ರಕ್ಕೆ ಸಹಿ ಮಾಡುವುದಾಗಿ ಹೇಳಿ ತವರು ಮನೆಗೆ ಹೋಗಿದ್ದ ಭಾಗ್ಯಾ ಕೂಡಾ ವಾಪಸ್‌ ಬಂದಿದ್ದಾಳೆ. ಎಲ್ಲವೂ ಸರಿ ಆಗುತ್ತಿದೆ ಎಂದು ಕುಸುಮಾ, ಧರ್ಮರಾಜ್‌ , ಮಕ್ಕಳು ಸಂತೋಷದಿಂದ ಇದ್ದಾರೆ. ಆದರೆ ತಾಂಡವ್‌ ಮಾತ್ರ, ಭಾಗ್ಯಾಳಿಗೆ ಡಿವೋರ್ಸ್‌ ಕೊಡುವ ಬಗ್ಗೆಯೇ ಯೋಚನೆ ಮಾಡುತ್ತಿದ್ದಾನೆ.

ಹೇಗಾದರೂ ಮಾಡಿ ಅಪ್ಪ, ಅಮ್ಮ ಹಾಗೂ ಮಕ್ಕಳನ್ನು ನನ್ನ ಕಡೆ ಒಲಿಸಿಕೊಂಡು ಭಾಗ್ಯಾಗೆ ಡಿವೋರ್ಸ್‌ ಕೊಡಬೇಕು ಎಂದು ತಾಂಡವ್‌ ವರಸೆ ಬದಲಿಸಿದ್ದಾನೆ. ಭಾಗ್ಯಾಗೆ ಯಾವ ರೀತಿ ತೊಂದರೆ ಕೊಡಬಹುದೋ ಅಷ್ಟು ತೊಂದರೆ ಕೊಡಲು ರೆಡಿಯಾಗಿದ್ದಾನೆ. ಭಾಗ್ಯಾ, ತನ್ವಿ ಪರೀಕ್ಷೆ ಬರೆಯಲು ಶಾಲೆಗೆ ಹೊರಡಲು ರೆಡಿ ಅಗುವಾಗ, ನಾನೇ ನಿಮ್ಮನ್ನು ಡ್ರಾಪ್‌ ಮಾಡುತ್ತೇನೆ ಎಂದು ತಾಂಡವ್‌ ಹೇಳುತ್ತಾನೆ. ತಾಂಡವ್‌ ಮಾಡುತ್ತಿರುವುದು ನಾಟಕ ಎಂದು ಭಾಗ್ಯಾಗೆ ಗೊತ್ತು. ಆದರೆ ಕುಸುಮಾ ಧರ್ಮರಾಜ್‌ಗೆ ಮಗನ ಬುದ್ಧಿ ಇನ್...