Bengaluru, ಮಾರ್ಚ್ 24 -- Bhagyalakshmi Serial: ಭಾಗ್ಯಾ, ತನ್ವಿ ಇಬ್ಬರೂ ಪರೀಕ್ಷೆ ಬರೆಯಲು ಬಂದರೆ ಅಲ್ಲಿ ಇಬ್ಬರಿಗೂ ವಿಘ್ನ ಎದುರಾಗಿದೆ. ಭಾಗ್ಯಾ ಎಕ್ಸಾಂ ಬರೆಯಬಾರದು ಎಂಬ ಕಾರಣಕ್ಕೆ ತಾಂಡವ್‌, ಅವಳ ಹಾಲ್‌ ಟಿಕೆಟ್‌ ಕದಿಯುತ್ತಾನೆ. ಇತ್ತ ಹಾಲ್‌ ಟಿಕೆಟ್‌ ಕಾಣದೆ ಭಾಗ್ಯಾ ಗಾಬರಿ ಆಗುತ್ತಾಳೆ. ಮತ್ತೊಂದು ಹಾಲ್‌ ಟಿಕೆಟ್‌ ಪಡೆದರೆ ಎಕ್ಸಾಂ ಬರೆಯಲು ಅವಕಾಶವಿದೆ ಆದರೆ 15 ನಿಮಿಷಗಳ ಒಳಗೆ ಬರಬೇಕು ಎಂದು ಪರೀಕ್ಷಾ ಮೇಲ್ವಿಚಾರಕಿ ಹೇಳಿದಾಗ ಭಾಗ್ಯಾಗೆ ಜೀವ ಬಂದಂತೆ ಆಗುತ್ತದೆ.

ಮತ್ತೊಂದೆಡೆ ಕುಸುಮಾ, ಸುನಂದಾ, ಪೂಜಾ ದೇವಸ್ಥಾನಕ್ಕೆ ಹೋಗಿ ಭಾಗ್ಯಾ, ತನ್ವಿ ಚೆನ್ನಾಗಿ ಪರೀಕ್ಷೆ ಮಾಡುವಂತೆ ಪ್ರಾರ್ಥಿಸಿ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಭಾಗ್ಯಾ ಹಾಗೂ ತಾಂಡವ್‌ ಇಬ್ಬರನ್ನೇ ಹೊರಗೆ ಎಲ್ಲಾದರೂ ಕಳಿಸುವಂತೆ ಕುಸುಮಾ ಬಳಿ ಹೇಳುತ್ತಾಳೆ. ಅಷ್ಟರಲ್ಲಿ ಸುನಂದಾಗೆ ಫಕೀರ ಕಾಣಿಸಿಕೊಳ್ಳುತ್ತಾನೆ. ನನ್ನ ಮಗಳ ಭವಿಷ್ಯ ಹೇಗಿದೆ ಎಂದು ಸುನಂದಾ ಕೇಳಿದಾಗ, ಆಕೆ ಬಹಳಷ್ಟು ಅಪವಾದ ಹೊತ್ತುಕೊಳ್ಳುತ್ತಾಳೆ. ಆದರೆ ಆಕೆ ಒಂಟಿಯಾಗಿ ಎಲ್ಲವ...