ಭಾರತ, ಮಾರ್ಚ್ 16 -- ಅರ್ಥ: ಸರ್ವಭಕ್ಷಕನಾದ ಮೃತ್ಯುವು ನಾನೇ. ಇನ್ನೂ ಹುಟ್ಟಲಿರುವ ಎಲ್ಲದರ ಉತ್ಪತ್ತಿತತ್ವ ನಾನೇ. ಸ್ತ್ರೀಯರಲ್ಲಿ ಕೀರ್ತಿ, ಶ್ರೀ, ವಾಕ್ಕು, ಸ್ಮೃತಿ, ಮೇಧಾಶಕ್ತಿ, ದೃಢತೆ ಮತ್ತು ತಾಳ್ಮೆ ನಾನು.

ಭಾವಾರ್ಥ: ಮನುಷ್ಯನು ಹುಟ್ಟಿದಾಗಿನಿಂದ ಪ್ರತಿ ಕ್ಷಣವೂ ಸಾಯುತ್ತಿರುತ್ತಾನೆ. ಹೀಗೆ ಸಾವು ಜೀವಿಯನ್ನು ಪ್ರತಿ ಕ್ಷಣವೂ ತಿನ್ನುತ್ತಿರುತ್ತದೆ. ಕಡೆಯ ಪೆಟ್ಟಿಗೆ ಸಾವು ಎಂದು ಹೆಸರು. ಕೃಷ್ಣನೇ ಆ ಸಾವು. ಮುಂದಿನ ಬೆಳವಣಿಗೆಯ ವಿಷಯ ಹೇಳುವುದೆಂದರೆ, ಎಲ್ಲ ಜೀವಿಗಳಲ್ಲಿ ಮೂಲ ಬದಲಾವಣೆಗಳಾಗುತ್ತವೆ. ಅವರು ಹುಟ್ಟುತ್ತಾರೆ, ಬೆಳೆಯುತ್ತಾರೆ, ಕೆಲ ಕಾಲ ಇರುತ್ತಾರೆ, ಮಕ್ಕಳನ್ನು ಪಡೆಯುತ್ತಾರೆ, ಕಡೆಗೆ ಮಾಯವಾಗುತ್ತಾರೆ. ಇವುಗಳಲ್ಲಿ ಮೊದಲನೆಯದು ಗರ್ಭದಿಂದ ಬಿಡುಗಡೆ. ಇದು ಕೃಷ್ಣ. ಮೊದಲ ಹುಟ್ಟು ಎಲ್ಲ ಮುಂದಿನ ಚಟುವಟಿಕೆಗಳ ಪ್ರಾರಂಭ.

ಇಲ್ಲಿ ಹೆಸರಿಸಿರುವ ಏಳು ಸಿರಿಗಳು -ಕೀರ್ತಿ, ಅದೃಷ್ಟ, ಸುಂದರ ಮಾತು, ಸ್ಮರಣಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆ- ಸ್ತ್ರೀ ಸಹಜ ಎಂದು ಪರಿಗಣಿಸಲಾಗುತ್ತವೆ. ಇವೆಲ್ಲ ...