Bengaluru, ಫೆಬ್ರವರಿ 19 -- ಅರ್ಥ: ವೇದಗಳನ್ನು ಅಭ್ಯಾಸಮಾಡಿ, ಸೋಮರಸವನ್ನು ಪಾನಮಾಡಿ, ಸ್ವರ್ಗಲೋಕಗಳನ್ನು ಅರಸುವವರು ಪರೋಕ್ಷವಾಗಿ ನನ್ನನ್ನು ಪೂಜಿಸುತ್ತಾರೆ. ಪಾಪ ಪ್ರತಿಕ್ರಿಯೆಗಳಿಂದ ಬಿಡುಗಡೆಯಾಗಿ ಪರಿಶುದ್ಧರಾಗಿ ಅವರು ಪುಣ್ಯ ಸ್ವರ್ಗಲೋಕದಲ್ಲಿ ಹುಟ್ಟುತ್ತಾರೆ; ಅಲ್ಲಿ ಸ್ವರ್ಗಸುಖಗಳನ್ನು ಸವಿಯುತ್ತಾರೆ.

ಭಾವಾರ್ಥ: ಇಲ್ಲಿ ತ್ರೈವಿದ್ಯಾ ಎಂದರೆ ಸಾಮವೇದ, ಯಜುರ್ವೇದ ಮತ್ತು ಋಗ್ವೇದಗಳನ್ನು ಸೂಚಿಸುತ್ತದೆ. ಈ ಮೂರು ವೇದಗಳ ಜ್ಞಾನದಲ್ಲಿ ಬಹುವಾಗಿ ಆಸಕ್ತಿ ಇರುವವನನ್ನು ಸಮಾಜವು ಗೌರವಿಸುತ್ತದೆ. ದುರದೃಷ್ಟದಿಂದ ವೇದವಿದ್ವಾಂಸರಲ್ಲಿ ಹಲವರಿಗೆ ಅವುಗಳನ್ನು ಅಧ್ಯಯನ ಮಾಡುವುದರ ಪರಮ ಉದ್ದೇಶವು ತಿಳಿದಿರುವುದಿಲ್ಲ. ಆದುದರಿಂದ ಕೃಷ್ಣನು ಇಲ್ಲಿ ತ್ರಿವೇದಿಗಳಿಗೆ ತಾನು ಕಟ್ಟಕಡೆಯ ಗುರಿ ಎಂದು ಘೋಷಿಸುತ್ತಾನೆ. ನಿಜವಾದ ತ್ರಿವೇದಿಗಳು ಕೃಷ್ಣನ ಚರಣಕಮಲಗಳ ಅಡಿಯಲ್ಲಿ ಆಶ್ರಯವನ್ನು ಪಡೆಯುತ್ತಾರೆ ಮತ್ತು ಪ್ರಭುವನ್ನು ಪ್ರಸನ್ನಗೊಳಿಸಲು ಪರಿಶುದ್ಧ ಭಕ್ತಿಸೇವೆಯಲ್ಲಿ ನಿರತರಾಗುತ್ತಾರೆ. ಭಕ್ತಿಸೇವೆಯು ಹರೇಕೃಷ್ಣ ಮಂತ್ರದ ಕೀರ್ತ...