Bengaluru, ಫೆಬ್ರವರಿ 8 -- ಭಗವದ್ಗೀತೆಯು ಹಿಂದೂಗಳ ಪವಿತ್ರ ಗ್ರಂಥ. ಇದು ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಉಪದೇಶಗಳಾಗಿವೆ. ಈ ಮಹಾಭಾರತ ಯುದ್ಧದಲ್ಲಿ ತನ್ನ ಪ್ರತಿಸ್ಪರ್ಧಿಯಾಗಿ ನಿಂತವರು ತನ್ನದೇ ಕುಲದವರು ಹಾಗೂ ತನ್ನದೇ ಸಂಬಂಧಿಕರು ಎಂದು ಅರ್ಜುನನು ಹತಾಶೆಗೆ ಒಳಗಾಗುತ್ತಾನೆ. ಮತ್ತು ತಾನು ಯುದ್ಧ ಮಾಡುವುದಿಲ್ಲವೆಂದು ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಾನೆ. ಆಗ ಕುಂತಿ ಪುತ್ರ ಅರ್ಜುನನಿಗೆ ಪರಮಾತ್ಮ ಶ್ರೀಕೃಷ್ಣನು ಭಗವದ್ಗೀತೆಯನ್ನು ಬೋಧಿಸಿದನು. ಕೃಷ್ಣ ಪರಮಾತ್ಮನು 'ನಿಜವಾಗಿಯೂ ಸಂತೋಷವಾಗಿರಲು ಬಯಸುವವರು ಎಂದಿಗೂ ಇತರರನ್ನು ಟೀಕಿಸುವುದಿಲ್ಲ. ಇತರರನ್ನು ಟೀಕಿಸಿದರೆ ಅದು ನಮ್ಮ ಸಂತೋಷ ಕಸಿದುಕೊಳ್ಳುತ್ತದೆ.' ಸಂತೋಷವಾಗಿರಲು ಬಯಸುವ ಜನರು ತಮ್ಮ ಸಂತೋಷದ ಜೊತೆಗೆ ಇತರರ ಸಂತೋಷದ ಬಗ್ಗೆಯೂ ಕಾಳಜಿ ವಹಿಸುತ್ತಾರೆ ಎಂದು ಹೇಳಿದನು. ಅಂದರೆ ಮನಸ್ಸಿನಲ್ಲಿ ಅಸೂಯೆಯನ್ನು ತುಂಬಿಕೊಂಡರೆ ಅದು ನಮ್ಮನ್ನು ವಿನಾಶದ ದಾರಿಗೆ ಕರೆದುಕೊಂಡು ಹೋಗುತ್ತದೆ. ಭಗವಾನ್‌ ಕೃಷ್ಣನು, ಭಗವದ್ಗೀತೆಯನ್ನು...