Bengaluru, ಮಾರ್ಚ್ 24 -- ಅರ್ಥ: ಓ ಪ್ರಭುವೆ, ಯೋಗೀಶ್ವರನೆ, ನಿನ್ನ ವಿಶ್ವರೂಪವನ್ನು ನಾನು ನೋಡಬಲ್ಲೆ ಎಂದು ನೀನು ಭಾವಿಸುವೆಯಾದರೆ ಆ ನಿನ್ನ ಅಪರಿಮಿತ ವಿಶ್ವರೂಪವನ್ನು ತೋರಿಸು.

ಭಾವಾರ್ಥ: ಪರಮಪ್ರಭುವಾದ ಕೃಷ್ಣನನ್ನು ಐಹಿಕ ಇಂದ್ರಿಯಗಳಿಂದ ನೋಡಲು, ಕಾಣಲು, ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಆದರೆ ಯಾರು ಪ್ರಾರಂಭದಿಂದಲೂ ಕೃಷ್ಣನ ಪ್ರೇಮಪೂರ್ವಕ ದಿವ್ಯ ಸೇವೆಯಲ್ಲಿ ನಿರತರಾಗಿರುತ್ತಾರೋ ಅವರಿಗೆ ಕೃಷ್ಣನು ತನ್ನನ್ನು ತೋರಿಸಿಕೊಳ್ಳುತ್ತಾನೆ. ಪ್ರತಿಯೊಂದು ಜೀವಿಯೂ ಒಂದು ಆಧ್ಯಾತ್ಮಿಕ ಕಿಡಿ ಮಾತ್ರ. ಆದುದರಿಂದ ಪರಮ ಪ್ರಭುವನ್ನು ನೋಡುವುದಾಗಲೀ, ಅರ್ಥ ಮಾಡಿಕೊಳ್ಳುವುದಾಗಲೀ ಸಾಧ್ಯವಿಲ್ಲ. ಭಕ್ತನಾದ ಅರ್ಜುನನು ತನ್ನ ಊಹಾಪೋಹಗಳ ಶಕ್ತಿಯನ್ನು ನೆಚ್ಚುವುದಿಲ್ಲ. ಅದರ ಬದಲು ಅವನು ಜೀವಿಯಾಗಿ ತನ್ನ ಮಿತಿಗಳನ್ನು ಒಪ್ಪಿಕೊಳ್ಳುತ್ತಾನೆ. ಕೃಷ್ಣನ ಸ್ಥಾನವು ಅಳತೆಗೆ ಮೀರಿದ್ದು, ಇದನ್ನು ಅರ್ಜುನನು ಒಪ್ಪಿಕೊಳ್ಳುತ್ತಾನೆ. ಜೀವಿಗೆ ಅನಂತವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ಅರ್ಜುನನು ತಿಳಿಯಬಲ್ಲ....