Bengaluru, ಫೆಬ್ರವರಿ 13 -- ಅರ್ಥ: ನಾನು ಮನುಷ್ಯರೂಪದಲ್ಲಿ ಇಳಿದು ಬಂದಾಗ ಮೂಢರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ಇಲ್ಲಿ ಇರುವುದೆಲ್ಲದರ ಪ್ರಭು ನಾನೇ. ನನ್ನ ಈ ದಿವ್ಯಪ್ರಕೃತಿಯು ಅವರಿಗೆ ತಿಳಿಯದು.

ಭಾವಾರ್ಥ: ಈ ಶ್ಲೋಕದಲ್ಲಿ ಪರಮಾತ್ಮನು ಮನುಷ್ಯರೂಪದಲ್ಲಿ ಕಾಣಿಸಿಕೊಂಡರೂ, ಸಾಮಾನ್ಯ ಮನುಷ್ಯನಲ್ಲ ಎನ್ನುವುದು ಸ್ಪಷ್ಟವಾಗಿದೆ. ಸಮಸ್ತ ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ನಿರ್ವಹಿಸುವ ಪರಮಾತ್ಮನು ಸಾಮಾನ್ಯ ಮನುಷ್ಯನಾಗಿರಲು ಸಾಧ್ಯವಿಲ್ಲ. ಆದರೂ ಕೃಷ್ಣನು ಒಬ್ಬ ಬಲಶಾಲಿ ಮನುಷ್ಯ ಮಾತ್ರ, ಬೇರೇನೂ ಅಲ್ಲ ಎಂದು ಭಾವಿಸುವ ಅನೇಕ ಮೂಢರಿದ್ದಾರೆ. ಆದರೆ ಬ್ರಹ್ಮ ಸಂಹಿತೆಯಲ್ಲಿ ದೃಢಪಡಿಸಿರುವಂತೆ (ಈಶ್ವರಃ ಪರಮಃ ಕೃಷ್ಣ) ಆತನೇ ಮೂಲ ಪರಮ ಪುರುಷನು; ಆತನು ಪರಮ ಪ್ರಭು.

ಈ ಜಗತ್ತಿನಲ್ಲಿ ಒಬ್ಬರು ಮತ್ತೊಬ್ಬರಿಗಿಂತ ದೊಡ್ಡವರಾಗಿ ಕಾಣುತ್ತಾರೆ. ಈ ಐಹಿಕ ಜಗತ್ತಿನ ವ್ಯವಹಾರಗಳ ಸಾಮಾನ್ಯ ನಿರ್ವಹಣೆಯಲ್ಲಿ ನಾವು ಒಬ್ಬ ಅಧಿಕಾರಿಯನ್ನು ಅಥವಾ ನಿರ್ದೆಶಕನನ್ನು ಕಾಣುತ್ತೇವೆ. ಅವನ ಮೇಲೆ ಒಬ್ಬ ಕಾರ್ಯದರ್ಶಿ ಇರುತ್ತಾನೆ. ಅ...