Bengaluru, ಫೆಬ್ರವರಿ 22 -- ಅರ್ಥ: ಕುಂತಿಯ ಮಗನಾದ ಅರ್ಜನನೇ, ನೀನು ಏನನ್ನೇ ಮಾಡು, ಏನನ್ನೇ ಭುಂಜಿಸು, ಏನನ್ನೇ ಅರ್ಪಿಸು ಅಥವಾ ಕೊಟ್ಟುಬಿಡು ಮತ್ತು ಯಾವುದೇ ತಪಸ್ಸನ್ನು ಮಾಡು ಅದನ್ನು ಕಾಣಿಕೆಯಾಗಿ ನನಗೆ అರ್ಪಿಸು.

ಭಾವಾರ್ಥ: ಹೀಗೆ ಯಾವುದೇ ಸನ್ನಿವೇಶದಲ್ಲಿಯೂ ಕೃಷ್ಣನನ್ನು ಮರೆಯದಂತೆ ತನ್ನ ಬದುಕನ್ನು ರೂಪಿಸಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ. ಪ್ರತಿಯೊಬ್ಬನೂ ತನ್ನ ದೇಹ ಮತ್ತು ಆತ್ಮಗಳನ್ನು ಒಟ್ಟಿಗೆ ಇರಿಸಿಕೊಳ್ಳಲು ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಕೃಷ್ಣನು ಮನುಷ್ಯನು ತನಗಾಗಿ (ಕೃಷ್ಣನಿಗಾಗಿ) ಕೆಲಸ ಮಾಡಬೇಕು ಎಂದು ಹೇಳುತ್ತಾನೆ. ಪ್ರತಿಯೊಬ್ಬರೂ ಜೀವಿಸಲು ಏನನ್ನಾದರೂ ತಿನ್ನಲೇಬೇಕು. ಆದುದರಿಂದ ಅವನು ಪ್ರಸಾದವನ್ನು ಸ್ವೀಕರಿಸಬೇಕು. ನಾಗರಿಕನಾದ ಪ್ರತಿಯೊಬ್ಬ ಮನುಷ್ಯನು ಯಾವುದಾದರೂ ಧಾರ್ಮಿಕ ವಿಧಿಗಳನ್ನು ಮಾಡಲೇಬೇಕು. ಆದುದರಿಂದ ಕೃಷ್ಣನು, "ಅದನ್ನು ನನಗಾಗಿ ಮಾಡು", ಎಂದು ಹೇಳುತ್ತಾನೆ. ಇದಕ್ಕೆ ಅರ್ಚನೆ ಎಂದು ಹೆಸರು. ಪ್ರತಿಯೊಬ್ಬನಿಗೂ ಏನನ್ನಾದರೂ ದಾನಮಾಡುವ ಪ್ರವೃತ್ತಿಯಿರುತ್ತದೆ; ಕೃಷ್ಣನು "ಅದನ್...